ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 16

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 16

0Shares

ಆ ತಾಯಿಯ ಮನೆ ಚಿಕ್ಕದಿತ್ತು ದೊಡ್ದ ಮನಸ್ಸಿತ್ತು🙏
ಮಕ್ಕಳ ಬಳಿ ದೊಡ್ಡ ಮನೆ ಇತ್ತು ಆದೆ ಮನಸ್ಸು ತುಂಬಾ ಚಿಕ್ಕದಿತ್ತು
….

    ಗಂಡ ತೀರಿದ ಬಳಿಕ ಆ ತಾಯಿ ತನ್ನ ಚಿಕ್ಕ ಜೋಪಡಿ ಯಲ್ಲಿ 3 ಹೆಣ್ಣು 4 ಗಂಡು ಮಕ್ಕಳನ್ನು ದೊಡ್ಡದು ಮಾಡಲು ಬಹಳ ಕಷ್ಟ ಪಟ್ಟಿದ್ದಳು ದೊಡ್ಡ ಮಗ 12 ವರ್ಷ ಚಿಕ್ಕದು 1 ತಿಂಗಳಿರುವಾಗ ಗಂಡ ಶಿವನ ಪಾದ ಸೇರಿದ್ದ ….😔
    ಅವರಿವರ ಮನೆ ಚಾಕರಿ ಮಾಡಿ
    ತಾನು ಅರೆ ಹೊಟ್ಟೆ ಯಲ್ಲಿದ್ದು 7 ಮಕ್ಕಳನ್ನು ಸಾಕಿದ್ದಳು ಎಲ್ಲರಿಗೂ ವಿದ್ಯೆ ಕೊಟ್ಟಿದ್ದಳು ಮದುವೆ ಮಾಡಿಸಿದ್ದಳು ತನ್ನ ಎಲ್ಲ ಕರ್ತವ್ಯ ನಿಭಾಯಿಸಿದ್ದಳು ..

    ಈಗ ಎಲ್ಲ ಮಕ್ಕಳು ಒಳ್ಳೊಳ್ಳೆ ಹುದ್ದೆಯಲ್ಲಿದ್ದಾರೆ ಒಳ್ಳೊಳ್ಳೆ ಮನೆತನ ದಲ್ಲಿದ್ದಾರೆ ..ವಿಶ್ವ ಮಾತೆಯರ ದಿನದಂದು ಎಲ್ಲ ಮಕ್ಕಳೂ ಕಾಲ್ ಮಾಡುತಿದ್ದರು ಹತ್ತಿರದಲ್ಲಿದ್ದವರು ಬಂದು ಸೆಲ್ಫಿಯೇ ತಗೊಂಡು ಹೋದರೆ ದೂರದಲ್ಲಿದ್ದವರು ಅಮ್ಮನ ಫೋಟೋ ಶೇರ್ ಮಾಡಿಕೊಳ್ಳುತಿದ್ದರು ಎಲ್ಲರಿಗೂ ತಮ್ಮ ತಮ್ಮ fb,whatsup,ಟ್ವೀಟರ್ instragram ಗಳಲ್ಲಿ ನನ್ನ ಅಮ್ಮ ಎಂದು ಶೇರ್ ಮಾಡಿಕೊಳ್ಳ ಬೇಕಿತ್ತು ಈಗೀಗ ಅದೊಂದು ಟ್ರೆಂಡ್ ಆಗಿ ಹೋಗಿತ್ತು..ನನ್ನ ತಾಯಿ ,ನನ್ನ ದೇವತೆ ಹಾಗೆ ಹೀಗೇ ಎಂದು ಪೋಸ್ಟ್ ಮಾಡುವುದು ಫ್ರೆಂಡ್ಸ್ ಗಳಿಗೆ ಟ್ಯಾಗ್ ಮಾಡುವುದು ಇತ್ಯಾದಿ ಗಳ ಮೂಲಕ ತಮ್ಮ ಸ್ಟೇಟಸ್ ಪ್ರದರ್ಶಿಸುತಿದ್ದರು😔😡😔..

    ಪಾಪದ ತಾಯಿ ಮಾತ್ರ ತನ್ನ ದುಸ್ಥಿತಿಗೆ ಮರುಗುತಿದ್ದಳು ಯಾಕೆಂದರೆ ಆಕೆ ಇರುವ ವೃದ್ಧಾಶ್ರಮದಲ್ಲಿ ರಾತ್ರಿ ಫ್ಯಾನ್ ಕೂಡ ತಿರುಗುತ್ತಿರಲಿಲ್ಲ ,ಸೊಳ್ಳೆಗಳ ಕಡಿತದ ಮದ್ಯೆ ವೇ ಮಲಗುತಿದ್ದಳು…ಮಕ್ಕಳಲ್ಲಿ ಹೇಳೋಣ ಎಂದರೆ ಯಾರೊಬ್ಬರೂ ಸಮೀಪಕ್ಕೂ ಬರುತ್ತಿರಲಿಲ್ಲ 😔😔..

    ಹೌದು ಆ ತಾಯಿ ಅಂದು 7 ಮಕ್ಕಳನ್ನು ತಾನು ಹಸಿವಲ್ಲಿದ್ದು ಒಂದು ಚಿಕ್ಕ ಗುಡಿಸಲಲ್ಲಿ ಸಾಕುತಿದ್ದಳು ಇಂದು 7 ಮಕ್ಕಳು ಅರಮನೆ ಯಂತಹ ಮನೆಯಲ್ಲಿದ್ದೂ ಕೂಡ ತಾಯಿಗೆ ಒಂದು ಕೊಠಡಿ ಇರಲಿಲ್ಲ ಅವರಲ್ಲಿ ,2 ಹೊತ್ತಿನ ಅನ್ನ ಹಾಕುವ ಯೋಗ್ಯತೆ ಇರಲಿಲ್ಲ 😡 ಯಾಕೆಂದರೆ
    ಅಂದು ಆ ತಾಯಿಯ ಮನೆ ಚಿಕ್ಕದಿತ್ತು ದೊಡ್ದ ಮನಸ್ಸಿತ್ತು
    ಇಂದು ಮಕ್ಕಳ ಬಳಿ ದೊಡ್ಡ ಮನೆ ಇತ್ತು ಆದರೆ ಮನಸ್ಸು ತುಂಬಾ ಚಿಕ್ಕದಾಗಿತ್ತುತ್ತು 😔😔😔😔..*

    ಇಂತಹ ಅದೆಷ್ಟು ತಂದೆ ತಾಯಿಯರು ನಮ್ಮ ನಿಮ್ಮ ಸಮಾಜದಲ್ಲೇ ಇರುವ ವೃದ್ದಾಶ್ರಮ ಗಳಲ್ಲಿಲ್ಲ 😔..

    ಇಂತಹ ಮಕ್ಕಳೇ ನೀವು ಹುಟ್ಟಿದ್ದು ಸಾರ್ಥಕ ಅಲ್ಲವೇ ??😡😡😡😡😡


    🔴🔴🔴🔴🔴🔴
    ಡಾ.ಶಶಿಕಿರಣ್ ಶೆಟ್ಟಿ
    ಹೋಂ ಡಾಕ್ಟರ್ ಫೌಂಡೇಶನ್
    ಉಡುಪಿ
    9945130630
    (ವಾಟ್ಸಪ್)
    ಪ್ರೀತಿಯ ಓದುಗರೇ ನಿಮ್ಮ ಪ್ರತಿಕ್ರೀಯೆ ಗಳನ್ನು ನೇರವಾಗಿ ನನಗೆ ವಾಟ್ಸಪ್ ಮಾಡಿ ….🙏
    🔴🔴🔴🔴🔴🔴

    0Shares

    Join Our WhatsApp Group!

    Stay updated with the latest news and updates by joining our WhatsApp group. Click the button below to join:

    Join Now