ಸೇಂಟ್ ಅಂತೋನಿ ಓರ್ಥೋಡಾಕ್ಸ್ ಸಿರಿಯನ್ ಚರ್ಚ್ ಅಮ್ಮುಂಜೆ, ಪವಿತ್ರ ಶಿಲುಬೆ ಹಬ್ಬ

ಸೇಂಟ್ ಅಂತೋನಿ ಓರ್ಥೋಡಾಕ್ಸ್ ಸಿರಿಯನ್ ಚರ್ಚ್ ಅಮ್ಮುಂಜೆ, ಪವಿತ್ರ ಶಿಲುಬೆ ಹಬ್ಬ
0Shares

ಅಮ್ಮುಂಜೆ: ಸಂತ ಅಂತೋನಿ. ಓರ್ಥೋಡಾಕ್ಸ್ ಸಿರಿಯನ್ ಚರ್ಚ್, ಅಮ್ಮುಂಜೆಯ ವತಿಯಿಂದ ಪವಿತ್ರ ಶಿಲುಬೆ ಹಬ್ಬವನ್ನು ಅಕ್ಟೋಬರ್ 2ರಂದು ಕೊಳಲಗಿರಿ ಕಾರ್ತಿಬೈಲ್‌ನ ಶಿಲುಬೆಯ ಮಂದಿರದಲ್ಲಿ ಭಕ್ತಿಭಾವದಿಂದ ಆಚರಿಸಲಾಗುವುದು.

ಈ ಪ್ರಯುಕ್ತ ಅಕ್ಟೋಬರ್ 2ರಂದು ಸಂಜೆ 5 ಗಂಟೆಗೆ ಸಂಧ್ಯಾ ಪ್ರಾರ್ಥನೆ ನಡೆಯಲಿದ್ದು, ನಂತರ ಸಂಜೆ 6 ಗಂಟೆಗೆ ದಿವ್ಯ ಬಲಿ ಪೂಜೆ, ಸಂದೇಶ ಹಾಗೂ ಆಶೀರ್ವಾದ ನಡೆಯಲಿದೆ. ದಿವ್ಯ ಬಲಿ ಪೂಜೆಯನ್ನು ವೆರಿ. ರಂಭಾನ್ ಜಿ. ಎಂ. ಸ್ಕರಿಯಾ ಅವರು ನೆರವೇರಿಸಲಿದ್ದಾರೆ.

ಪೂಜೆಯ ಬಳಿಕ ಭಕ್ತಾದಿಗಳಿಗಾಗಿ ಭೋಜನಕೂಟದ ವ್ಯವಸ್ಥೆ ಮಾಡಲಾಗಿದೆ.

ಪವಿತ್ರ ಶಿಲುಬೆ ಹಬ್ಬದ ಪ್ರಯುಕ್ತ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಆಮಂತ್ರಣವಿದ್ದು, ಎಲ್ಲರಿಗೂ ಹೃತ್ಪೂರ್ವಕ ಸ್ವಾಗತವನ್ನು ಧರ್ಮಗುರುಗಳು, ಆಡಳಿತ ಮಂಡಳಿ ಹಾಗೂ ಚರ್ಚಿನ ಸರ್ವ ಸದಸ್ಯರು ಕೋರಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now