
ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ಆಶ್ರಯದಲ್ಲಿ ಅಕ್ಟೋಬರ್ 17ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4’ ಕಾರ್ಯಕ್ರಮದ ಚಪ್ಪರ ಮುಹೂರ್ತವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಪುತ್ತೂರಿನ ಸಾಂಸ್ಕೃತಿಕ ಪರಂಪರೆ ಹಾಗೂ ತುಳುನಾಡಿನ ಜನಪದ ಕಲೆಯ ವೈಭವವನ್ನು ಅನಾವರಣಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಪಿಲಿಗೊಬ್ಬು ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಸಾಮ್ರಾಟ್ ಪುತ್ತೂರು ಸಂಸ್ಥೆ ಸ್ಥಾಪಕಾಧ್ಯಕ್ಷ ಶ್ರೀ ಸಹಜ ರೈ ಬಾಳಜ್ಜ, ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಶ್ರೀ ಶರತ್ ಆಳ್ವ ಕುರೇಲು, ಕಾರ್ಯಾಧ್ಯಕ್ಷ ಶ್ರೀ ರತನ್ ರೈ ಕುಂಬ್ರ, ಸಹ ಅಧ್ಯಕ್ಷ ರಾಜೇಶ್ ಪಂಜಾಬ್, ಉಪಾಧ್ಯಕ್ಷರಾದ ಶ್ರೀ ಶಂಕರ್ ಭಟ್ ಉತ್ತರ, ಪವನ್ ಶೆಟ್ಟಿ ಕಂಬಳತ್ತಡ್ಡ, ಕಿರಣ್ ಶೆಟ್ಟಿ ಕಂಬಳತ್ತಡ್ಡ, ಕಿರಣ್ ರಾ. ಕಾರ್ಯದರ್ಶಿಗಳಾದ ಪ್ರೀತಮ್ ಶೆಟ್ಟಿ ಪೆರ್ನೆ, ಗೌತಮ್ ಗೌಡ, ಸಂಘಟನಾ ಕಾರ್ಯದರ್ಶಿಗಳು, ಆಶ್ರಮ ರೈ, ಆಚಾರ್ಯ ಕೋಶಾಧಿಕಾರಿ ಅಶೋಕ್ ಅಡೂರು, ಸಮಿತಿಯ ಸದಸ್ಯರಾದ ರಂಜಿತ್ ಶೆಟ್ಟಿ ಗುಬ್ಬ, ಜಗದೀಶ್ ನಾಯಕ್, ಶರತ್ ಬಲ್ನಾಡು, ಸಚಿನ್ ಪಟ್ಟೆ, ಭರತ್ ಚನಿಲ, ಶರತ್ ಮುಂಡಾಸ್, ಮನೋಹರ್ ಅರಬ್ ಬರಿಮಾರು, ಹರಬ್ ಬರಿಮಾರು, ಪ್ರವರ್ ರಾವ್ ಬರಿಮಾರು, ಅನೇಕರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now