
ಮೇ.03: ಮಡಿಕೇರಿ ರೆಡ್ಬ್ರಿಕ್ಸ್ ಸತ್ಕಾರ್ನಲ್ಲಿ ರಾಜ್ಯ ಮಟ್ಟದ ‘ಸಾಹಿತ್ಯ-ಸಾಂಸ್ಕೃತಿಕ ಸಂಭ್ರಮ’
ಸಾ.ದಯಾ ಸಂಪಾದಿತ ಮತ್ತು ಗೋಪಾಲ ತ್ರಾಸಿ ಅವರ ಕೃತಿಗಳ ಅನಾವರಣ
ಮುಂಬಯಿ (ಆರ್ಬಿಐ), ಎ.26: ಸಮರ್ಥ ಕನ್ನಡಿಗರು (ನೋಂ ) ಕೊಡಗು ಜಿಲ್ಲೆ ಮತ್ತು ದಿ| ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಮುಂಬಯಿ ಜಂಟಿ ಆಶ್ರಯದಲ್ಲಿ ರಾಜ್ಯ ಮಟ್ಟದ ‘ಸಾಹಿತ್ಯ-ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮ ಮತ್ತು ಕೃತಿ ಲೋಕಾರ್ಪಣೆ ಹಾಗೂ ಸಮೀಕ್ಷೆ ಮತ್ತು ಕವಿಗೋಷ್ಠಿ ಇದೇ ಬರುವ ಮೇ.03ನೇ ಶನಿವಾರ ಪೂರ್ವಾಹ್ನ ರೆಡ್ ಬ್ರಿಕ್ಸ್ ಸತ್ಕಾರ್ ಭವನ ಮಡಿಕೇರಿ ಇಲ್ಲಿ ಆಯೋಜಿಸಿದೆ.

ದಿ| ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ನ ಸ್ಥಾಪಕಿ ಶ್ರೀದೇವಿ ಚಂದ್ರಶೇಖರ ರಾವ್ ಅಧ್ಯಕ್ಷತೆಯಲ್ಲಿ ಜರಗುವ ‘ಸಾಹಿತ್ಯ-ಸಾಂಸ್ಕೃತಿಕ ಸಂಭ್ರಮಕ್ಕೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಉದ್ಘಾಟಿಸಿ ಚಾಲನೆಯನ್ನೀಡಲಿದ್ದಾರೆ.
ಚಂದ್ರಶೇಖರ್ ರಾವ್ ಟ್ರಸ್ಟ್ನ ಉಪಾಧ್ಯಕ್ಷ ಕೆ.ಪ್ರತಾಪ್ ಆಗಮಿಸಲಿದ್ದು, ಮುಂಬಯಿ ಅಲ್ಲಿನ ಸಾಹಿತಿ ಹಾಗೂ ರಂಗಭೂಮಿ ಕಲಾವಿದ ಕೃತಿಕರ್ತ ಗೋಪಾಲ ತ್ರಾಸಿ ಅವರ ‘ನುಡಿತೇರು’ ಸಾಹಿತ್ಯ ಕಲಾ ತೋರಣ ಕೃತಿ ಹಾಗೂ ಸಾಹಿತಿ, ರಂಗಭೂಮಿ ಕಲಾವಿದ ಸಾ.ದಯಾ ಸಂಪಾದಿತ ದಿ| ಚಂದ್ರಶೇಖರ್ ರಾವ್ ಅವರ ‘ಹರಟೆಗಳು’ ಕೃತಿಯನ್ನು ಆಕಾಶವಾಣಿ ಮಡಿಕೇರಿ ಇದರ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಲೋಕಾರ್ಪಣೆ ಮಾಡುವರು. ಮುಂಬಯಿ ಲೇಖಕಿ ಡಾ| ಜಿ.ಪಿ ಕುಸುಮ ಅವರು ಹಟೆಗಳು ಮತ್ತು ಮಂಡ್ಯ ಲೇಖಕಿ ಶ್ವೇತಾ ಎಂ.ಯು ಅವರು ನುಡಿಸಿರಿ ಕೃತಿ ಪರಿಚಯಿಸಲಿದ್ದಾರೆ. ನಂತರ ಪುಷ್ಪಾ ಕೃಷ್ಣಾನಂದ ಶೇಟ್ ಮತ್ತು ಮುನೀರ್ಅಹ್ಮದ್ ಅವರಿಗೆ ಗೌರವಾರ್ಪಣೆ ನಡೆಯಲಿದೆ.

ಗೋಪಾಲ ತ್ರಾಸಿ ಅವರ ಅಧ್ಯಕ್ಷತೆಯಲ್ಲಿ ಕವಿ-ಕಾವ್ಯಕಲರವ ಜರಗಲಿದ್ದು ಸ್ಮಿತಾ ಅಮೃತರಾಜ್ ಸಂಪಾಜೆ ಉದ್ಘಾಟಿಸಲಿದ್ದಾರೆ. ಗಿರೀಶ್ ಕಿಗ್ಗಾಲು, ಮಿಲನ ಭರತ, ಹೇಮಂತ್ ಪಾರೇರ, ಕೃಪಾ ದೇವರಾಜ್, ರಮ್ಯಾ ಮೂರ್ನಾಡು, ರಂಜಿತ್ ಕವಲಪಾರ, ಡಾ| ಜಿ.ಪಿ ಕುಸುಮ, ವಿನೋದ್ ಮೂಡಗದ್ದೆ, ಸರೋಜ ಅಮಾತಿ, ಸಂತೋಷ್ ಕುಡೆಕ್ಕಲ್, ಲೀಲಾ ದಯಾನಂದ, ಹರೀಶ್ ಕಿಗ್ಗಾಲು, ಸುನೀತಾ ಕುಶಾಲನಗರ, ಕುಮುದ ಶೆಟ್ಟಿ, ಸಂಗೀತಾ ರವಿರಾಜ್, ಜಾನೆಟ್ ಐ.ಜೆ, ಹರೀಶ್ ಲೀಲಾ ಮತ್ತಿತರ ಕವಿಗಳು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಸಂಭ್ರಮ ಅಂಗವಾಗಿ ಶಿವಂ ನೃತ್ಯ ತಂಡ ಮೂರ್ನಾಡು ಹಾಗೂ ಜನನಿ ಮತ್ತು ತಂಡ ಮಡಿಕೇರಿ ಇವರು ಸಮೂಹ ನೃತ್ಯವನ್ನು ಹಾಗೂ ಜಾನಪದ ಪರಿಷತ್ ಮಡಿಕೇರಿ ತಾಲೂಕು ಘಟಕದ ಸದಸ್ಯೆಯರು ಗಾಯನ ಪ್ರಸ್ತುತ ಪಡಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿನ ಕಲಾ ಮತ್ತು ಸಾಹಿತ್ಯಾಭಿಮಾನಿಗಳು ಪಾಲ್ಗೊಳ್ಳುವಂತೆ ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಲಿಂಗೇಶ್ ಹುಣಸೂರು, ಪ್ರಧಾನ ಸಂಚಾಲಕಿ ಜಯಲಕ್ಷಿ ಕೆ., ಮತ್ತು ಸಂಚಾಲಕರ ಬಳಗ ಮತ್ತು ಚಂದ್ರಶೇಖರ್ ರಾವ್ ಟ್ರಸ್ಟ್ನ ಪದಾಧಿಕಾರಿಗಳು ಈ ಮೂಲಕ ವಿನಂತಿಸಿದ್ದಾರೆ.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























