ಶೈಲಜಾ ಬಾಯರಿ ಗೆ ಪಿ. ಎಚ್ ಡಿ. ಪ್ರದಾನ

ಶೈಲಜಾ ಬಾಯರಿ ಗೆ ಪಿ. ಎಚ್ ಡಿ. ಪ್ರದಾನ

0Shares

ಮಣಿಪಾಲ: ಕ್ರಿಯಾತ್ಮಕ ಶೈಕ್ಷಣಿಕ ಸಂಶೋಧನೆಯಲ್ಲಿ ನಿರಂತರ ಸಕ್ರಿಯ ರಾಗಿರುವ ಮಣಿಪಾಲದ ಮಾಧವ ಕೃಪಾ ಶಾಲಾ ಗಣಿತ ಶಿಕ್ಷಕಿ ಶ್ರೀಮತಿ ಶೈಲಜಾ ಬಾಯರಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧ ‘NAVIGATING THROUGH NATIVE LANGUAGES: TEACHING MATHEMATICS IN A MULTILINGUAL CLASSROOM IN COASTAL KARNATAKA’ ಕ್ಕೆ ಮಣಿಪಾಲದ ಮಾಹೆ (ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್) ಪಿ ಎಚ್ ಡಿ ಪ್ರದಾನ ಮಾಡಿದೆ. ಮಾಹೆ ವಿಶ್ವವಿದ್ಯಾಲಯದ ಮಣಿಪಾಲ್ ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್ ಮುಖ್ಯಸ್ಥೆ ಯಾಗಿದ್ದು ಪ್ರಸಕ್ತ ಪೂನಾ ದ ಸಿಂಬಯೋಸಿಸ್ ವಿಶ್ವವಿದ್ಯಾಲಯದಲ್ಲಿ ಡೀನ್ ಆಗಿರುವ ಡಾ.ನೀತಾ ಇನಾಂದಾರ್ ಇವರ ಮಾರ್ಗದರ್ಶನದಲ್ಲಿ ಈ ಸಂಶೋಧನಾ ಪ್ರಬಂಧ ಮಂಡಿಸಲಾಗಿತ್ತು.

ಶಿಕ್ಷಕಿ ಶೈಲಜಾ ತನ್ನ ಪಿ ಎಚ್ ಡಿ ಸಂಶೋಧನಾ ವ್ಯಾಪ್ತಿಯ ಹೊರಗೂ ಕಳೆದ ಒಂದೂವರೆ ದಶಕದಿಂದ ಹಲವು ಕ್ರಿಯಾತ್ಮಕ, ರಚನಾತ್ಮಕ ಗಣಿತ ಯೋಜನೆ, ಬೋಧನಾ ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ವಿವಿಧ ಅಂತರಾಷ್ಟ್ರೀಯ ಗಣಿತ ಶಿಕ್ಷಣ ಸಮ್ಮೇಳನಗಳಲ್ಲಿ ಆಹ್ವಾನಿತರಾಗಿ, ಅನ್ವೇಷಣಾ ಪ್ರಬಂಧ, ಉಪನ್ಯಾಸ, ಪೋಸ್ಟರ್ ಪ್ರಾತ್ಯಕ್ಷಿಕೆ, ಮಂಡಿಸಿದ್ದಾರೆ. ಇವರ ಸಂಶೋಧನಾ ಪ್ರಬಂಧಗಳು ಅಂತರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಗೊಂಡಿದ್ದು; ಮಣಿಪಾಲ ಯೂನಿವರ್ಸಲ್ ಪ್ರೆಸ್ ನಿಂದ ವಿದ್ಯಾರ್ಥಿಗಳಿಗಾಗಿ ದ್ವಿಭಾಷಾ ಗಣಿತ ಪದಗಳ ಸಿದ್ಧಸಂಚಿಯೂ ಪ್ರಕಟಗೊಂಡಿದೆ.

ಇವರಿಗೆ ಫಿಲಿಪೈನ್ಸ್ ಗಣಿತ ಸಮ್ಮೇಳನದಲ್ಲಿ ಅತ್ಯುತ್ತಮ ಪ್ರಬಂಧ, ಪೋಸ್ಟರ್ ಪ್ರಶಸ್ತಿ ಹಾಗೂ ದೆಹಲಿಯ Sಔಈ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. ಶೈಲಜಾ ಶಾಲಾ ಶಿಕ್ಷಕರಿಗೆ ವಿಷಯಾಧಾರಿತ ಆಳ ಬೋಧನೆ, ದ್ವಿಭಾಷಾ ಗಣಿತ ಬೋಧನೆ, ಕ್ರಿಯಾತ್ಮಕ ಶೈಕ್ಷಣಿಕ ಸಂಶೋಧನೆ ಕುರಿತು ಹಲವು ವಿಶೇಷ ತರಬೇತಿ ನಡೆಸಿದ್ದಾರೆ. ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಬಯೋಮೆಡಿಕಲ್ ವಿಭಾಗದ ಪ್ರೊಫೆಸರ್ ಡಾ. ಮುರಲೀಧರ್ ಬಾಯರಿ ಪತ್ನಿ. ಈಕೆ ಡಾ ಟಿ ಎಂ ಎ ಪೈ ಶಿಕ್ಷಣ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿನಿ ಹಾಗೂ ಚಿನ್ನದ ಪದಕ ವಿಜೇತೆ. ಶೈಲಜಾ ನವಂಬರ್ 21 ರಂದು ನಡೆಯಲಿರುವ ಮಾಹೆ ಘಟಿಕೋತ್ಸವದಲ್ಲಿ ಪಿ. ಎಚ್ ಡಿ. ಪದವಿ ಸ್ವೀಕರಿಸಲಿರುವರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now