
ಕಟಪಾಡಿ: ಲಯನ್ಸ್ ಕ್ಲಬ್ ಕಟಪಾಡಿ ವತಿಯಿಂದ ಸಾಮಾಜಿಕ ಸೇವಾ ಚಟುವಟಿಕೆಗಳ ಅಂಗವಾಗಿ ಕಟಪಾಡಿಯ ಸೈಂಟ್ ವಿನ್ಸೆಂಟ್ ಪೌಲ್ ಚರ್ಚ್‌ಗೆ ಶುದ್ಧ ಕುಡಿಯುವ ನೀರಿನ ಘಟಕ (Water Filter Unit) ಹಸ್ತಾಂತರಿಸಲಾಯಿತು. ಈ ಘಟಕವನ್ನು ಜಿಲ್ಲಾ ಗವರ್ನರ್ ಪಿ.ಎಂ.ಜೆ.ಎಫ್ ಲಯನ್ ಸಪ್ನಾ ಸುರೇಶ್ ಹಾಗೂ ಚೀಫ್ ಕೋರ್ಡಿನೇಟರ್ – ಕಲ್ಚರಲ್ ಆಕ್ಟಿವಿಟೀಸ್ ಪಿ.ಎಂ.ಜೆ.ಎಫ್ ಲಯನ್ ರಂಜನ್ ಕಲ್ಕೂರ ರವರ ಪ್ರಾಯೋಜಕತ್ವದಲ್ಲಿ, ವಲಯ ಅಧ್ಯಕ್ಷ ಲಯನ್ ರೋಷನ್ ಡಿ’ಸಿಲ್ವಾ ರವರ ಮುಖಾಂತರ ಹಸ್ತಾಂತರಿಸಲಾಯಿತು.
ಚರ್ಚಿನ ಧರ್ಮಗುರು ಫಾ. ಪ್ರಸನ್ನ ಅವರು ಧನ್ಯವಾದ ವ್ಯಕ್ತಪಡಿಸಿ, “ಲಯನ್ಸ್ ಕ್ಲಬ್ ಕೈಗೊಂಡಿರುವ ಈ ಶುದ್ಧ ಜಲ ಸೇವಾ ಕಾರ್ಯವು ಜನತೆಗೆ ಬಹು ಉಪಯೋಗಕಾರಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸೆಕ್ರೆಟರಿ ಲಯನ್ ಶಾಲಿನಿ, ಜಿಲ್ಲಾ ಕೋಶಾಧಿಕಾರಿ ಲಯನ್ ಶಶಿಧರ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಲಯನ್ ಗಿರೀಶ್ ರಾವ್, ಕ್ಲಬ್ ಅಧ್ಯಕ್ಷ ಲಯನ್ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ಲಯನ್ ಪ್ರಭಾಕರ್ ಆಚಾರ್ಯ, ಖಜಾಂಚಿ ಲಯನ್ ರಿತೇಶ್ ಕೋಟ್ಯಾನ್, ಚಾರ್ಟರ್ಡ್ ಸದಸ್ಯ ಲಯನ್ ಪ್ರಭಾಕರ್ ಪಾಲನ್, ಲಯನ್ ಜಗದೀಶ್ ಕಾಮತ್ ಹಾಗೂ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.

ನಮ್ಮ ವರದಿಗಾರರು ಸ್ಟೀವನ್ ಕುಲಾಸೊ ಉದ್ಯಾವರ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now