ಲಯನ್ಸ್ ಕ್ಲಬ್ ಅಂಬಲಪಾಡಿ ಫ್ರೈಡ್ ನ ಮಾಜಿ ಅಧ್ಯಕ್ಷ ಲಯನ್ ಜಯಾನಂದ ಕೊಡವೂರು ನಿಧನ

ಲಯನ್ಸ್ ಕ್ಲಬ್ ಅಂಬಲಪಾಡಿ ಫ್ರೈಡ್ ನ ಮಾಜಿ ಅಧ್ಯಕ್ಷ ಲಯನ್ ಜಯಾನಂದ ಕೊಡವೂರು ನಿಧನ
0Shares

ಉಡುಪಿ : ಲಯನ್ಸ್ ಜಿಲ್ಲೆ 317C ಇದರ ಪ್ರತಿಷ್ಠಿತ ಕ್ಲಬ್ ಲಯನ್ಸ್ ಕ್ಲಬ್ ಅಂಬಲಪಾಡಿ ಫ್ರೈಡ್ ನ
ಮಾಜಿ ಅಧ್ಯಕ್ಷ, ಕೆನರಾ ಬ್ಯಾಂಕ್, ನಿವೃತ್ತ ಉದ್ಯೋಗಿ ಲಯನ್ ಜಯಾನಂದ ಕೊಡವೂರು ಹೃದಯಘಾತದಿಂದ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಲಯನ್ಸ್ ಕ್ಲಬ್ ಅಂಬಲಪಾಡಿ ಪ್ರೈಡ್ ನಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, ವಲಯ ಅಧ್ಯಕ್ಷರಾಗಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಲಯನ್ಸ್ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕ್ಯಾಬಿನೆಟ್ ನಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಕಳೆದ ವರ್ಷ ಎಂ.ಜೆ.ಎಫ್. ತಮ್ಮ ದೇಣಿಗೆ ನೀಡಿದ್ದರು. ಮಾತ್ರವಲ್ಲದೆ ಸಮಾಜದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.

ಅವರು ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಬಂಧು ಬಳಗದವರು ಆಗಲಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now