
ಕುಂದಾಪುರ : ಲಯನ್ಸ್ ಕ್ಲಬ್ ಕುಂದಾಪುರ ವೆಯ್ಟ್ ಝೋನ್ ಇವರ ಆಶ್ರಯದಲ್ಲಿ ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ಜಿಲ್ಲಾ 317C ಯಾ ಕಾರ್ಯದರ್ಶಿ ಲಯನ್ ಸದಾನಂದ ನಾವಡ ವೀಲ್ ಚೇರ್ ನ್ನು ಹಸ್ತಾಂತರ ಮಾಡಿದರು,
ಈ ಸಂದರ್ಭದಲ್ಲಿ ಮಾತನಾಡಿ ಲಯನ್ಸ್ ಸಂಸ್ಥೆ ವಿಶ್ವಾದ್ಯದಂತ್ಯ ಸಮಾಜ ಸೇವೆ ಯಾ ಮೂಲಕ ಗುರುತಿಸಿಕೊಂಡಿದೆ, ಹಲವಾರು ವರುಷ ಗಳಿಂದ eye camp ಮಾಡುದರ ಮೂಲಕ ಬೆಳಕನ್ನು ನೀಡಿದ ಹೆಮ್ಮೆಯ ಸಂಸ್ಥೆಯಾಗಿದೆ,
ಇದರ ಜೊತೆಗೆ ನೊಂದವರಿಗೆ ಸಹಾಯ ಹಸ್ತ ನೀಡುದರ ಮೂಲಕ ಜನರ ಮನಸ್ಸನ್ನು ಗೆದ್ದಿದೆ,
ಇವತ್ತು ಲಯನ್ಸ್ ಕ್ಲಬ್ ಕುಂದಾಪುರ ವೆಯ್ಟ್ ಝೋನ್ ಹೊಸಬದುಕು ಸಂಸ್ಥೆಗೆ ವೀಲ್ ಚೇರ್ ನೀಡಿ ಅವರಿಗೆ ಹೊಸಬದುಕನ್ನು ನೀಡಿದೆ ಇಂತ ಹಲವು ಸಮಾಜಮುಖಿ ಕಾರ್ಯಕ್ರಮ ಗಳು ನಡೆಯಲಿ ಎಂದು ನುಡಿದರು.
ಲಯನ್ಸ್ ಕ್ಲಬ್ ಕುಂದಾಪುರ ವೆಯ್ಟ್ ಝೋನ್ ನ ಅಧ್ಯಕ್ಷ ಲಯನ್ ಹುಸೇನ್ ಹೈಕಾಡಿ ಅಧ್ಯಕ್ಷತೆ ವಹಿಸಿದರು.
ಸಮಾರಂಭ ದಲ್ಲಿ ಏನ್ ಏನ್ ಒ ಉಡುಪಿ ಜಿಲ್ಲಾ ಅಧ್ಯಕ್ಷ ರಾದ ನಕ್ವಾ ಯಾಯ್ಯ, ಲಯನ್ಸ್ 317 ಸಿ ಯಾ ಪ್ರಾಂತಿಯ ಅಧ್ಯಕ್ಷ ಲಯನ್ ಸರಸ್ವತಿ ಪುತ್ರನ್,ಲಯನ್ಸ್ ಜಿಲ್ಲಾ 317ಸಿ ಯಾ ಒನ್ ಡಿಸ್ಟ್ರಿಕ್ ಒನ್ ಆಕ್ಟಿವಿಟಿಸ್ ಇದರ ಮುಖ್ಯ ಸಂಯೋಜಕರಾದ ಲಯನ್ ಎಕನಾಥ್ ಬೋಳಾರ್, ಲಯನ್ ರಜತ್ ಕುಮಾರ್ ಹೆಗ್ಡೆ ಲಯನ್ಸ್ ಕ್ಲಬ್ ಕೆಮ್ಮಣ್ಣು ಇದರ ಅಧ್ಯಕ್ಷ ಲಯನ್ ಜಗದೀಶ್ ಕೆಮ್ಮಣ್ಣು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಕುಂದಾಪುರ ವೆಯ್ಟ್ ಝೋನ್ ಇದರ ಉಪಾಧ್ಯಕ್ಷ ಲಯನ್ ತ್ರಿವಿಕ್ರಮ್ ನಾಯಕ್ ವಂದಿಸಿದರು, ಕಾರ್ಯದರ್ಶಿ ಲಯನ್ ಪ್ರದೀಪ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now