ಹೋಂ ಡಾಕ್ಟರ್ ಫೌಂಡೇಶನ್ ವಿಶಿಷ್ಟ ಆಚರಣೆ ಯಲ್ಲಿ ನಾಲ್ಕನೇ ವರ್ಷದ ದೀಪಾವಳಿ ಆಚರಣೆ

ಹೋಂ ಡಾಕ್ಟರ್ ಫೌಂಡೇಶನ್ ವಿಶಿಷ್ಟ ಆಚರಣೆ ಯಲ್ಲಿ ನಾಲ್ಕನೇ ವರ್ಷದ ದೀಪಾವಳಿ ಆಚರಣೆ

0Shares

ಹೋಂ ಡಾಕ್ಟರ್ ಫೌಂಡೇಶನ್ ವಿಶಿಷ್ಟ ಆಚರಣೆ ಯಲ್ಲಿ 4 ನೆಯ ವರ್ಷದ ದೀಪಾವಳಿ ಆಚರಣೆ ಯನ್ನು ಕೊಳಲಗಿರಿಯ ಸ್ವರ್ಗ ಆಶ್ರಮದ ಮೈದಾನದಲ್ಲಿ ವಿಶಿಷ್ಟ ವಾಗಿ ಹಮ್ಮಿಕೊಳ್ಳಲಾಗಿದೆ.. ಕಾರ್ಯಕ್ರಮ ದಲ್ಲಿ ಒಟ್ಟು 11 ಅಸಹಾಯಕರಿಗೆ ಸಹಾಯದ ಚೆಕ್ ವಿತರಣೆ ಜೊತೆ ಅಸಹಾಯಕ ಕುಟುಂಬ ಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುವುದು … ಈ ಬಾರಿ ನಮ್ಮ ಸ್ವರ್ಗ ಆಶ್ರಮದ ಅಸಹಾಯಕ ದೇವರ ಮಕ್ಕಳ ಜೊತೆ ಸೇರಿ, ಅವರೇ ತಯಾರಿಸಿದ ಹಣತೆ ಗಳನ್ನು ಬೆಳಗಿಸಿ ಹಬ್ಬದ ಆಚರಣೆ ಮಾಡುವ ಸಂತಸದ ಜೊತೆಗೆ, ಅದೇ ಅಸಹಾಯಕರು ತಯಾರಿಸಿದ ಅತ್ರಾಸ (ಕಜ್ಜಾಯ ) ವನ್ನು ಮಾರಾಟ ಕ್ಕಿಟ್ಟಿದ್ದು ಈ ಅಸಹಾಯಕರ ಮುಖದಲ್ಲಿ ಒಂದು ಮಂದಹಾಸ ಮೂಡಿಸ ಬಲ್ಲದು. ಈ ಸಂದರ್ಭದಲ್ಲಿ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ದೀಕ್ಷಾ ಬ್ರಹ್ಮಾವರ ಅವರ ತಂಡದ ಕಾರ್ಯಕ್ರಮ ವೂ ಇದ್ದು ಒಟ್ಟಲ್ಲಿ ನಿಮ್ಮನ್ನು ನಗೆ ಕಡಲಲ್ಲಿ ತೇಲಿಸಲಿದೆ, ಹಾಗೆ ನಮ್ಮ ಅಸಹಾಯಕ ವೃದ್ಧರ ಕಾರ್ಯಕ್ರಮ ವೂ ಇದ್ದು ಒಟ್ಟಲ್ಲಿ ಮನರಂಜನೆ ಜೊತೆ ವಿಶಿಷ್ಟ ಶೈಲಿಯ ಹಬ್ಬದ ಆಚರಣೆಗೆ ಸಾಕ್ಷಿ ಯಾಗಲಿದ್ದೇವೆ.. ಬನ್ನಿ ಈ ವಿಶಿಷ್ಟ ಕಾರ್ಯಕ್ರಮ ದಲ್ಲಿ ನೀವೂ ಪಾಲ್ಗೊಳ್ಳಿ 🙏🙏..

ಸ್ಥಳ : ಸ್ವರ್ಗ ಆಶ್ರಮ ಮೈದಾನ ಕೊಳಲಗಿರಿ (9945130630)
ದಿನಾಂಕ :19/10/2025
ಸಮಯ :4.30 ರಿಂದ 8.30

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now