
- ಕಾಲೇಜಿನ ವಾರ್ಷಿಕ ಮ್ಯಾಗಜಿನ್ “ಸ್ಪಂದನ” 42ನೇ ಆವೃತ್ತಿಯನ್ನು ಪ್ರಾಂಶುಪಾಲ ಡಾ. ರಾಬರ್ಟ್ ರೋಡ್ರಿಗ್ಸ್ ಅವರು ಫೆಬ್ರವರಿ 21, 2025 (ಶುಕ್ರವಾರ) ರಂದು ಎಸ್‌ಎಂಎಸ್ ಮಿನಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಅವರು ವಿದ್ಯಾರ್ಥಿಗಳ ಸೃಜನಾತ್ಮಕ ಮತ್ತು ಬೌದ್ಧಿಕ ಅಭಿವ್ಯಕ್ತಿಗೆ ಬರವಣಿಗೆಯ ಮಹತ್ವವನ್ನು ವಿವರಿಸಿ, ಮ್ಯಾಗಜಿನ್‌ಗಾಗಿ ಲೇಖನಗಳನ್ನು ಬರೆಯುವ ಅಭ್ಯಾಸವನ್ನು ಬೆಳೆಸಲು ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನಿತ್ತರು.
ಕಾರ್ಯಕ್ರಮವನ್ನು III BAನ ಫಾತಿಮಾ ನಿರೂಪಿಸಿದರು. ಇಂಗ್ಲಿಷ್ ವಿಭಾಗದ ಶ್ರೀಮತಿ. ಸೀಮಾ ಲೂಯಿಸ್ ಸ್ವಾಗತಿಸಿದರು, ಮ್ಯಾಗಜಿನ್ ಸಮಿತಿಯ ಸಂಚಾಲಕಿ ಶ್ರೀಮತಿ. ವನಿತಾ ಶೆಟ್ಟಿ (ವಾಣಿಜ್ಯ ವಿಭಾಗ) ಧನ್ಯವಾದವನ್ನು ಅರ್ಪಿಸಿದರು. ಈ ಸಮಾರಂಭದಲ್ಲಿ ಉಪಪ್ರಾಂಶುಪಾಲ ಶ್ರೀ ಪ್ರಸನ್ನ ಶೆಟ್ಟಿ, IQAC ಸಂಯೋಜಕ ಲೆಫ್ಟಿನೆಂಟ್ ಅಶ್ವಿನ್ ಶೆಟ್ಟಿ, ಮ್ಯಾಗಜಿನ್ ಸಮಿತಿಯ ಎಲ್ಲಾ ಸದಸ್ಯರು, ಅಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























