ಬ್ರಹ್ಮಾವರ: ಬಾರಕೂರು ರಂಗನಕೆರೆಯ ಕೊರಗ ಸಮುದಾಯದ ಯುವತಿ ಅಶ್ವಿತಗೆ ಡಾಕ್ಟರೇಟ್.

ಬ್ರಹ್ಮಾವರ: ಬಾರಕೂರು ರಂಗನಕೆರೆಯ ಕೊರಗ ಸಮುದಾಯದ ಯುವತಿ ಅಶ್ವಿತಗೆ ಡಾಕ್ಟರೇಟ್.
0Shares

ಬ್ರಹ್ಮಾವರ: ಕರಾವಳಿ ಜಿಲ್ಲೆಯ ಮೂಲ ನಿವಾಸಿಗಳು ಎನ್ನಲಾದ ಕೊರಗ ಸಮುದಾಯ ಇಂದಿಗೂ ಉನ್ನತ ಶಿಕ್ಷಣ ಪಡೆದವರು ತೀರಾ ವಿರಳವಾಗಿದ್ದು ಬಾರಕೂರು ರಂಗನಕೆರೆಯ ಅಶ್ವಿತ ಮೈಸೂರು ವಿಶ್ವವಿದ್ಯಾನಿಲಯದ ಸೈಂಟ್ ಫಿಲೋಮಿನಾಸ್ ಕಾಲೇಜ್ (ಆಟೋನಮಾಸ್) ಬನ್ನಿಮಂಟಪ ಇಲ್ಲಿ ಡಾಕ್ಟರ್ ನೂರ್ ಮುಬಾಶಿರ್ ಸಿ ಎ, ಇವರ ಮಾರ್ಗದರ್ಶನದಲ್ಲಿ ಮಂಡಿಸಿದ
ಪ್ರಬAದಕ್ಕೆ ಡಾಕ್ಟರೇಟ್ ಲಭಿಸಿದೆ.

ಡಾ. ಅಶ್ವಿತ ಶ್ರೀ ದುರ್ಗಾಪರಮೇಶ್ವರಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ರಂಗನಕೆರೆ ಇಲ್ಲಿ ಅಂಗನವಾಡಿಯಿAದ ಒಂದನೇ ತರಗತಿಯಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆದು ವರೆಗೆ ಬಳಿಕ ಬಾರಕೂರು ಮೇರಿನೊಲ್ ಶಾಲೆಯಲ್ಲಿ ಪ್ರೌಢ ಶಿಕ್ಷಣ, ನಂತರ ದ್ವಿತೀಯ ಪಿಯುಸಿ ನ್ಯಾಷನಲ್ ಜೂನಿಯರ್ ಕಾಲೇಜ್ ಬಾರ್ಕೂರು ಇಲ್ಲಿ ಓದಿರುತ್ತಾರೆ. ನಂತರ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪದವಿ ಕಾಲೇಜು ಮತ್ತು ಅಧ್ಯಯನ ಕೇಂದ್ರದಲ್ಲಿ ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ ಮತ್ತು ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ವಿದ್ಯಾಭ್ಯಾಸವನ್ನು ಪಡೆದ ಇವರು ಜಿಲ್ಲೆಯ ನಾನಾ ಕೊರಗ ಸಂಘಟನೆಯಲ್ಲಿ ತೊಡಗಿಸಿಕೊಂಡ ಗಣೇಶ್ ಬಾರ್ಕೂರು ಅನಿತಾದಂಪತಿಗಳ ಕಿರಿಯ ಪುತ್ರಿ

ಇವರು ಸಂಶೋಧನೆಯಲ್ಲಿ ಏ ಸ್ಟಡಿ ಹಾಸ್ಪಿಟಲ್ ಆಂಕ್ಸೆÊಟಿ ಆ್ಯಂಡ್ ಸೈಕೋ ಸೋಶಿಯಲ್ ಸ್ಟೇಟಸ್ ಆಫ್ ವುಮೆನ್ ಅಂಡರ್ ಗೋಯಿಂಗ್ ಕೀಮೋ ಥೇರಪಿ ಫಾರ್ ಬ್ಲಡ್ ಕ್ಯಾನ್ಸ್ರ್ ಎಂಬ ಮಹಾ ಪ್ರಬಂಧವನ್ನು ಸಮಾಜಕಾರ್ಯ ವಿಷಯದಲ್ಲಿ ಆಂಗ್ಲ ಭಾಷೆಯಲ್ಲಿ ಮಂಡಿಸಿ ಪಿ ಹೆಚ್ ಡಿ ಪದವಿಯನ್ನು ಪಡೆದಿರುತ್ತಾರೆ.
ಸ್ಲಗ್: ಕರಾವಳಿಯ ಮೂಲ ನಿವಾಸಿ ಕೊರಗ ಯುವತಿ ಅಶ್ವಿತಗೆ ಡಾಕ್ಟರೇಟ್
ಬೈಟ್: ಡಾ, ಅಶ್ವಿತ. ರಂಗನಕೆರೆ ಬಾರಕೂರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now