
24.09.26 ರಂದು ಬಾರ್ಕೂರು ನೇಷನಲ್ ಐ ಟಿ ಐ ಯಲ್ಲಿ ಘಟಿಕೋತ್ಸವ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಬಾರ್ಕೂರುವಿದ್ಯಾಭಿವರ್ಧಿನಿ ಸಂಘದ ಕಾರ್ಯದರ್ಶಿ ಶ್ರೀ. ಅಶೋಕ್ ಕುಮಾರ್ ಶೆಟ್ಟಿ ಅವರು ವಹಿಸಿ, ಪದವಿ ಪಡೆದ ವಿದ್ಯಾರ್ಥಿಗಳು ಹೆತ್ತವರ ಹಾಗೂ ಗುರುಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಕೆಲಸ ಮಾಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಉಡುಪಿಯ ಯು.ಎಸ್. ನಾಯಕ್ ಚಾರಿಟೇಬಲ್ ಟ್ರಸ್ಟಿನ ಯು.ಸುರೇಶ್ ನಾಯಕ್, ಜಾನೆಟ್ ಲೂಯಿಸ್, ಸಂಸ್ಥೆ ಸಂಚಾಲಕರಾದ ರಾಮಚಂದ್ರ ಕಾಮತ್,ಆರ್ಕಿಟೆಕ್ಚರ್ ಜೈ ಕಿಶನ್ ಶೆಟ್ಟಿ ಮತ್ತು ಸಂಸ್ಥೆಯ ಮಾಜಿ ಪ್ರಾಂಶುಪಾಲರಾದ ವೆಂಕಟೇಶ ಕ್ರಮದಾರಿ ಉಪಸ್ಥಿತರಿದ್ದರು. ಅಶ್ವಿನಿ ಆಚಾರ್ಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಸ್ಸಂಸ್ಥೆಯ ಪ್ರಾಚಾರ್ಯರಾದ ಭಾಸ್ಕರ ಉಪಾಧ್ಯರು ಸ್ವಾಗತವನ್ನು ಕೋರಿದರು.ಕಾರ್ಯಕ್ರಮದ ನಿರೂಪಕರಾಗಿ ಮಂಜುನಾಥ್ ನಾಯಕ್ ಹಾಗೂ ನಾಗರಾಜ್ ದೇವಾಡಿಗ ವಂದಿಸಿದರು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now