
ದಿನಾಂಕ 31-10-2025 ರಂದು ಬೆಳಿಗ್ಗೆ 8:30 ಗಂಟೆಗೆ ಜಿಲ್ಲಾDAR ಕೇಂದ್ರ ಕಚೇರಿ ಚಂದು ಮೈದಾನ ಉಡುಪಿ ಇಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಅಭ್ಯರ್ಥಿಗಳಿಗೂ ಹಾಗೂ ಸೈಬರ್ ಭದ್ರತಾ ಜಾಗೃತಿ ಮಾಸಾಚರಣೆ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಾಗುವುದು.
National Cyber Security Awareness Month
• ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಅಕ್ಟೋಬರ್ 2025 – ಸೈಬರ್ ಜಾಗೃತಿ ಮಾಸಾಚರಣೆ ಅಂಗವಾಗಿ ಅಕ್ಟೋಬರ್ 10 ರಿಂದ ಅಕ್ಟೋಬರ್ 30ರವರೆಗೆ #CyberJagruthiUdupi ಮತ್ತು #CyberSafeUdupi ಹ್ಯಾಶ್ಟ್ಯಾಗ್ ನೊಂದಿಗೆ ವಿಶೇಷ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಮಾಡಲಾಯಿತು
• ಸಾರ್ವಜನಿಕರು ಹಾಗೂ ಪೊಲೀಸ ರಿಂದ ಸೈಬರ್ ಸುರಕ್ಷತೆ ಕುರಿತಾಗಿ ರೀಲ್‌ಗಳು, ಮೀಮ್ಸ್‌ಗಳು ಅಥವಾ ಚಿತ್ರಗಳು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ #CyberJagruthiUdupi ಮತ್ತು #CyberSafeUdupi ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಪೋಸ್ಟ್ ಮಾಡಲು ಆಹ್ವಾನಿಸಿದ್ದು ಸಾರ್ವಜನಿಕರು 4 ಮೆಮ್ಸ್, 12 ರೀಲ್ಸ್, 6 ಡ್ರಾಯಿಂಗ್ ಹಾಗೂ ಪೊಲೀಸರಿಂದ ಪ್ರತ್ಯೇಕವಾಗಿ 10 ರೀಲ್ಸ್/ ವಿಡಿಯೋ ಮಾಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
• ಉಡುಪಿ ಜಿಲ್ಲಾ ಪೊಲೀಸ್ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸೈಬರ್ ಭದ್ರತಾ ಜಾಗೃತಿ ಮಾಸಾಚರಣೆ ಪ್ರಯುಕ್ತ ಅಕ್ಟೋಬರ್ 15 ರಿಂದ 30 ರವರೆಗೆ 20 ಸೈಬರ್ ಜಾಗೃತಿ ಪೋಸ್ಟ ಗಳು ಹಾಗೂ 25 ಸೈಬರ್ ಜಾಗೃತಿ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿರುತ್ತದೆ.
• ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಸೈಬರ್ ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ನಗರದ ಸಿನಿಮಾ ಚಿತ್ರಮಂದಿರಗಳಲ್ಲಿ ಸೈಬರ್ ಜಾಗೃತಿ ವಿಡಿಯೋ ವನ್ನು ಪ್ರಸಾರ ಮಾಡಲಾಯಿತು.
• ಉಡುಪಿ ಜಿಲ್ಲೆಯಾದ್ಯಂತ ಸೈಬರ್ ಭದ್ರತಾ ಮಾಸಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಪೊಲೀಸರು ಸುಮಾರು 74 ಶಾಲಾ/ ಕಾಲೇಜು ಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಸೈಬರ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸಿ ಮತ್ತು 5037 ಜನರಿಗೆ ಸೈಬರ್ ಸುರಕ್ಷತೆ ಬಗ್ಗೆ ಪ್ರತಿಜ್ಞೆ ಯನ್ನು ನೀಡಲಾಯಿತು.
• ಆನ್ಲೈನ್ ಮೂಲಕ ಸೈಬರ್ ಸುರಕ್ಷತೆ ಬಗ್ಗೆ ಪ್ರತಿಜ್ಞೆ ತೆಗೆದುಕೊಳ್ಳಲು ಲಿಂಕ್ ನೀಡಿದ್ದು,ಇದರಲ್ಲಿ 666 ಜನರು ಪ್ರಮಾಣಪತ್ರವನ್ನು ಇಮೇಲ್ ಮೂಲಕ ಪಡೆದಿದ್ದಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now