
ಹೊಯ್ಗಿ ಚಾರಿಟೆಬಲ್ ಟ್ರಸ್ಟ್ (ರಿ.), ಜಯಂಟ್ಸ್ ಗ್ರೂಪ್ ಉಡುಪಿ, ಹಳೇ ವಿದ್ಯಾರ್ಥಿ ಸಂಘ, ನಾರ್ತ್ ಶಾಲೆ ಉಡುಪಿ, ಇವರು ರಕ್ತ ನಿಧಿ ಕೇಂದ್ರ, ಉಡುಪಿ ಸರಕಾರಿ ಜಿಲ್ಲಾಸ್ಪತ್ರೆ ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಆದಿತ್ಯವಾರ ನೆಡೆಯಿತು

ಹೊಯ್ಗಿ ಟ್ರಸ್ಟ್ ನ ಗಂಗಾಧರ ನಾಯಕ್, ಇವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೈತನ್ಯ ಸೋಶಿಯಲ್ ಫೌಂಡೇಷನ್ ಟ್ರಸ್ಟ್ ನ ಸಂಸ್ಥಾಪಕರಾದ ಸುನಿಲ್ ಸಾಲಿಯಾನ್, ಜಯಂಟ್ಸ್ ಉಡುಪಿಯ ದಿವಾಕರ್ ಸಾಲಿಯಾನ್, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ರಾವ್, ತೆಂಕಪೇಟೆ ವಾರ್ಡಿನ ನಗರಸಭಾ ಸದಸ್ಯರಾದ ಮಾನಸ ಪೈ, ಶಾಲಾ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಸಾವಿತ್ರಿ , ನ್ಯಾಷನಲ್ ಸೊಸೈಟಿಯ ಸಿಇಒ ಚಿದಾನಂದ ಪೈ , ವಿವಿಧ ಸಂಸ್ಥೆಯ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಸರ್ಕಾರಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಮೆಡಿಕಲ್ ಆಫೀಸರ್ ಡಾ. ವೀಣಾಕುಮಾರಿ ರಕ್ತದಾನದ ಕುರಿತು ಮಾಹಿತಿ ನೀಡಿದರು. ಶ್ರೀನಾಥ್ ಹಿರಿಯಡ್ಕ ಧನ್ಯವಾದಗೈದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now