
ದಿನಾಂಕ 26/09/2025 ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದಲ್ಲಿ ರಾತ್ರಿ ಸುಮಾರು 08:50 ಗಂಟೆಯಿಂದ 09:15 ಗಂಟೆಯ ಮಧ್ಯೆ ಅವಧಿಯಲ್ಲಿ, ದೇವಸ್ಥಾನದಲ್ಲಿ ಪಿರ್ಯಾದಿ ದೇವಿಪ್ರಿಯಾ ಅವರ ಬ್ಯಾಗ್ ನ ಜಿಪ್ ತೆಗೆದು ಅದರೊಳಗೆ ಇಟ್ಟುಕೊಂಡಿದ್ದ ಅಂದಾಜು ಸುಮಾರು 3 ಪವನ್ ನ ಹವಳದ ಚಿನ್ನದ ಸರ ಕದ್ದಿರುತ್ತಾರೆ. ಕಳವಾದ ಚಿನ್ನದ ಅಂದಾಜು ಮೌಲ್ಯರೂ 2. 5 ಲಕ್ಷ ಆಗಬಹುದು ಎಂಬುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 73/2025 ಕಲಂ. 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಸದ್ರಿ ಪ್ರಕರಣದ ಆರೋಪಿಯ ಪತ್ತೆ ಬಗ್ಗೆ ಹೆಚ್ ಡಿ.ಕುಲಕರ್ಣಿ, ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ನೀಲೇಶ್ ಚೌಹಾಣ್ ಪೊಲೀಸ್ ವೃತ್ತ ನಿರೀಕ್ಷಕರು, ಬೈಂದೂರು ವೃತ್ತರವರ ಮೇಲ್ ಉಸ್ತುವಾರಿಯಲ್ಲಿ ಕೊಲ್ಲೂರು ಪೊಲೀಸ್ ಠಾಣಾ ಉಪ-ನಿರೀಕ್ಷಕರಾದ ವಿನಯ್ ಎಂ ಕೊರ್ಲಹಳ್ಳಿ ರವರ ನೇತೃತ್ವದಲ್ಲಿ ಪೊಲೀಸ್ ಉಪ-ನಿರೀಕ್ಷಕರಾದ ಸುಧಾರಾಣಿ .ಟಿ ಹಾಗೂ ಸಿಬ್ಬಂದಿಯವರಾದ ರಾಮ ಪೂಜಾರಿ , ನಾಗೇಂದ್ರ, ಸುರೇಶ್, ನರಸಿಂಹ, ರಾಘವೇಂದ್ರ, ವಾಸಂತಿ ಹಾಗೂ ಸಂತೋಷರವರ ತಂಡ ಸಿಸಿಟಿವಿ ಕ್ಯಾಮೆರಾ ಮತ್ತು ತಾಂತ್ರಿಕ ಸಹಾಯದಿಂದ, ಆರೋಪಿತೆ ಯಾಧವ ದುರ್ಗಮ್ಮ, ಶಂಕರಪಳ್ಳಿ, ಗಣೇಶನಗರ, ರಂಗಾರೆಡ್ಡಿ ಜಿಲ್ಲೆ, ತೆಲಂಗಾಣ ಇವಳನ್ನ ದಸ್ತಗಿರಿ ಮಾಡಿ, ಕಳುವು ಮಾಡಿದ ಅಂದಾಜು ಸುಮಾರು ರೂ.2,50,000/- ಮೌಲ್ಯದ 3 ಪವನ್ ನ ಹವಳದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿತೆಯಿಂದ ಪ್ರಕರಣ ದಾಖಲಾಗಿ 24 ಗಂಟೆಗಳ ಒಳಗಾಗಿ ವಶಪಡಿಸಿಕೊಳ್ಳಲಾಗಿದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now