
ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಬ್ರಹ್ಮಾವರದ ಸೈಂಟ್ ಮೇರೀಸ್ ಸಿರಿಯನ್ ಕಾಲೇಜು ಬ್ರಹ್ಮಾವರದ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್‌ಕಾಲೇಜು ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ (ಪುರುಷರು ಮತ್ತು ಮಹಿಳೆಯರು) 2025 ಯಶಸ್ವಿ ಯಾಗಿ ಜರುಗಿತು. ಸಮಾರೋಪ ಸಮಾರಂಭವು ಸೆಪ್ಟೆಂಬರ್ 16ರಂದು ಬೆಳಿಗ್ಗೆ 9 ಗಂಟೆಗೆ SMS ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಭವ್ಯವಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆವ್. ಫಾ. ಎಂ.ಸಿ. ಮಥಾಯಿ, ಅಧ್ಯಕ್ಷರು, OSCES (ರಿ.), ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಶ್ರೀ ಬಿಜು ನಾಯರ್, ನಿರ್ದೇಶಕರು, ಗೋವಾ ಫ್ರೆಶ್ ಪ್ರೈವೇಟ್ ಲಿಮಿಟೆಡ್ ಹಾಗೂ ಶ್ರೀ ಬಿರ್ತಿ ರಾಜೇಶ್ ಶೆಟ್ಟಿ, ಅಧ್ಯಕ್ಷರು, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ,ಶ್ರೀ ಎಲ್.ಎನ್. ಹರಿಪ್ರಸಾದ್ ರೈ, ಅಧ್ಯಕ್ಷರು, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್,ಶ್ರೀ ಆಲ್ವಾರಿಸ್ ಡಿ’ಸಿಲ್ವಾ, ಕಾರ್ಯದರ್ಶಿ, ಕಾಲೇಜು ವಿಭಾಗ,ಶ್ರೀ ಆಲನ್ ರೋಹನ್ ವಾಝ್, ಪ್ರಧಾನ ಕಾರ್ಯದರ್ಶಿ, OSCES (ರಿ.), ಬ್ರಹ್ಮಾವರ,ಶ್ರೀ ಎಂ. ಚಂದ್ರಶೇಖರ್ ಹೆಗ್ಡೆ, ನಿವೃತ್ತ ಪಿ.ಇಡಿ, SMS ಕಾಲೇಜು ಬ್ರಹ್ಮಾವರ, ಶ್ರೀ ಸತೀಶ್ ಶೆಟ್ಟಿ, ಅಧ್ಯಕ್ಷರು, ರೋಟರಿ ಬ್ರಹ್ಮಾವರ,ಶ್ರೀ ಪ್ರಶಾಂತ್ ಕಾಡೂರು, ಜನನಿ ಎಂಟರ್‌ಪ್ರೈಸಸ್, ಬ್ರಹ್ಮಾವರ
ಶ್ರೀ ಜಯಂತ್ ಶೆಟ್ಟಿ, ಮ್ಯಾನೇಜರ್, SBI ಬ್ರಹ್ಮಾವರ,ಡಾ. ಹರಿದಾಸ್ ಕುಲೂರು, ವೀಕ್ಷಕರು, ಮಂಗಳೂರು ವಿಶ್ವವಿದ್ಯಾನಿಲಯ, ಹಾಗೂ ಶ್ರೀ ಸಚಿನ್ ಪೂಜಾರಿ, ಕಾರ್ಯದರ್ಶಿ, ಹಳೆಯ ವಿದ್ಯಾರ್ಥಿಗಳ ಸಂಘ,ಹಾಗೂ ಡಾ. ಜೆರಾಲ್ಡ್ ಎಸ್.ಡಿ’ಸೋಜಾ, ದೈಹಿಕ ಶಿಕ್ಷಣ ನಿರ್ದೇಶಕರು, ಮಂಗಳೂರು ವಿಶ್ವವಿದ್ಯಾನಿಲಯ, ಡಾ. ರಾಬರ್ಟ್ ರೋಡ್ರಿಗ್ಸ್ ಜೆ., ಪ್ರಾಂಶುಪಾಲರು, SMS ಕಾಲೇಜು ಬ್ರಹ್ಮಾವರ, ಶ್ರೀ ಶೇಷಾಪ್ಪ ಗೌಡ, ಅಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಶ್ರೀ ವೆಂಕಟೇಶ್ ಭಟ್, ದೈಹಿಕ ಶಿಕ್ಷಣ ನಿರ್ದೇಶಕರು, SMS ಕಾಲೇಜು ಬ್ರಹ್ಮಾವರ, ಡಾ. ರಾಮಚಂದ್ರ ಪಾಟ್ಕರ್, ವಿವಿಧ ಕಾಲೇಜು ಗಳ ದೈಹಿಕ ಶಿಕ್ಷಕರು, ಉಪನ್ಯಾಸಕರು, ಉಪಸ್ಥಿತರಿದ್ದರು.ಮಹಿಳಾ ವಿಭಾಗ ದಲ್ಲಿ
ಸಮಗ್ರ ಪ್ರಥಮ ಸ್ಥಾನ ಆಳ್ವಾಸ್ ಕಾಲೇಜು ಮೂಡಬಿದ್ರಿ, ದ್ವಿತೀಯ ಸ್ಥಾನ ಎಸ್ ಡಿ ಎಮ್ ಕಾಲೇಜು, ತೃತೀಯ ಸ್ಥಾನ ಕೆ ಎಸ್ ಎಸ್ ಸುಬ್ರಮಣ್ಯ ಹಾಗೂ ನಾಲ್ಕನೇ ಸ್ಥಾನ ವನ್ನು ಜಿ ಫ್ ಜಿ ಸಿ ಅಜ್ಜರಕಾಡು ಪಡೆದರೆ, ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಆಳ್ವಾಸ್ ಕಾಲೇಜು ಮೂಡಬಿದ್ರಿ, ದ್ವಿತೀಯ ಸ್ಥಾನ ಎಸ್ ಡಿ ಎಮ್ ಕಾಲೇಜು, ತೃತೀಯ ಸ್ಥಾನ ಕೆ ಎಸ್ ಎಸ್ ಸುಬ್ರಮಣ್ಯ ಹಾಗೂ ನಾಲ್ಕನೇ ಸ್ಥಾನ ವನ್ನು ಎಸ್ ಬಿ ಸಿ ಕಾರ್ಕಳ ಪಡೆತುಕೊಂಡರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now