ಸಂತ ಅನ್ನಮ್ಮ ದೇವಾಲಯ ತೊಟ್ಟo : ಸೆ. 7 ರoದು ‘ತರಕಾರಿ ಸಂತೆ 2025’

ಸಂತ ಅನ್ನಮ್ಮ ದೇವಾಲಯ ತೊಟ್ಟo : ಸೆ. 7 ರoದು ‘ತರಕಾರಿ ಸಂತೆ 2025’

0Shares

ಸ. 7 : ತೊಟ್ಟಂ ಚರ್ಚಿನಲ್ಲಿ ತರಕಾರಿ ಸಂತೆ
ಮಲ್ಪೆ: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ( ರಿ. ) – ತೊಟ್ಟಾಮ್ ಘಟಕ ಮತ್ತು ಶ್ರೀಸಾಮಾನ್ಯ ಆಯೋಗ , ಸಂತ ಆನ್ನಮ್ಮ ದೇವಾಲಯ , ತೊಟ್ಟಾಮ್ ಇವರ ಜಂಟಿ ಆಶ್ರಯದಲ್ಲಿ “ತರಕಾರಿ ಸಂತೆ – 2025” ದೇವಾಲಯದ ಸಭಾಂಗಣದಲ್ಲಿ ಸಪ್ತೆಂಬರ್ 7 , 2025 ಬೆಳಗ್ಗೆ 9:15 ರಿಂದ ಆಯೋಜಿಸಲಾಗಿದೆ.
ಸಪ್ತೆಂಬರ್ 8 ಮೇರಿ ಮಾತೆಯ ಜನ್ಮ ದಿನವಾಗಿದ್ದು ಕ್ರೈಸ್ತ ಬಾಂದವರಿಗೆ ತುಂಬಾ ಪವಿತ್ರ ದಿನವಾಗಿದೆ. ಕರಾವಳಿಯ ಕ್ರೈಸ್ತ ಬಾಂದವರು ತೆನೆ ಹಬ್ಬವನ್ನು ಕೂಡ ಆಚರಿಸುತ್ತಾರೆ. ಸಾಂಪ್ರದಾಯಿಕವಾಗಿ ಎಲ್ಲಾ ಮನೆಗಳಲ್ಲಿ ತರಕಾರಿ ಪಲ್ಯಗಳೊಂದಿಗೆ ಈ ಹಬ್ಬವನ್ನು ಆಚರಿಸುತ್ತಾರೆ.
ಎಲ್ಲಾ ತರಕಾರಿಗಳು ಒಂದೇ ಚಪ್ಪರದೊಳಗೆ ಲಭ್ಯವಾಗಬೆಕೆಂಬ ಉದ್ದೇಶದಿಂದ ಆಯೋಜಕರು ಕಳೆದ ವರ್ಷ ಆಯೋಜನೆ ಮಾಡಿದ್ದ ತರಕಾರಿ ಸಂತೆ ಯಶಸ್ವಿಯಾಗಿದ್ದು ತೊಟ್ಟಾಮ್ ಮಾತ್ರವಲ್ಲದೆ ನೆರೆಕರೆಯ ಭಕ್ತ ಭಾಂದವರು ಈ ಸಂತೆಯಲ್ಲಿ ಪಾಲ್ಗೊಂಡು ತುಂಬಾ ಖುಶಿ ಪಟ್ಟಿದ್ದರು. ಈ ಯಶಸ್ಸಿನಿಂದ ಸ್ಪೂರ್ತಿ ಪಡೆದ ಆಯೋಜಕರು ಈ ವರ್ಷ “ತರಕಾರಿ ಸಂತೆ – 2025” ಯನ್ನು ಮತ್ತಷ್ಟು ವೈಶಿಷ್ಟವಾಗಿ ಹಾಗೂ ವ್ಯವಸ್ಥಿತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶ್ ( ರಿ. ) – ತೊಟ್ಟಾಮ್ ಘಟಕದ ಆಧ್ಯಕ್ಷೆ ವೀಣಾ ಫೆರ್ನಾಂಡಿಸ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now