
ಸರಕಾರಿ ಪದವಿಪೂರ್ವ hb ಕಾಲೇಜು ಕರ್ಜೆ ಇದರ 2025 -26ನೇ ಸಾಲಿನ ಇಂಟರಾಕ್ಟ್ ಕ್ಲಬ್ ಪದಪ್ರಧಾನ ಸಮಾರಂಭ ಸಾಲಿನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಶಾಲೆಯ ಸಭಾಂಗಣದಲ್ಲಿ ಜರುಗಿತು. ಪದಪ್ರದಾನ ಅಧಿಕಾರಿಯಾಗಿ ಮಾತ್ರಸಂಸ್ಥೆ ರೋಟರಿ ಬ್ರಹ್ಮಾವರದ ಅಧ್ಯಕ್ಷರಾದ ಸತೀಶ್ ಶೆಟ್ಟಿಯವರು ಇಂಟರಾಕ್ಟ್ ಅಧ್ಯಕ್ಷ ದೀಕ್ಷಾ ಶೆಟ್ಟಿ ಇವರಿಗೆ ಪದಪ್ರಧಾನ ನೆರವೇರಿಸಿ ನಾಯಕತ್ವ ಹಾಗೂ ಸೇವೆಯಲ್ಲಿ ಇಂಟರಾಕ್ಟ್ ಕ್ಲಬ್ಬಿನ ಮಹತ್ವದ ಬಗ್ಗೆ ತಿಳಿಸಿದರು.
ಶಾಲಾ ಮುಖ್ಯ್ಯೋಪಾಧ್ಯಾಯರಾದ ಶ್ರೀ ಶ್ರೀಧರ್ ಶೆಟ್ಟಿ ಯವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪತ್ಯೇತರ ಚಟುವಟಿಕೆಗಳ ಮಹತ್ವ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಇಂಟರಾಕ್ಟ್ ಸಭಾಪತಿ ಜಗದೀಶ್ ಕೆಮ್ಮಣ್ಣು ಇಂಟರಾಕ್ಟ್ ಸಂಯೋಜಕ ರಘುನಾಥ್ ಶೆಟ್ಟಿ ಶಿಕ್ಷಕ ಸಂಯೋಜಕರಾದ ರಾಜೇಶ್ ಆನಂದ್ , ರೋಟರಿ ಕಾರ್ಯದರ್ಶಿ ರೆಕ್ಸನ್ ಮೋನಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಟರ್ಯಾಕ್ಟ್ ಕಾರ್ಯದರ್ಶಿ ಶ್ರೇಯಾ ವಂದಿಸಿದರು.
ಇದೆ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ಗಿಡಗಳನ್ನು ವಿತರಿಸಲಾಯಿತು



Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now