
“ರಾಜ್ಯಶಾಸ್ತ್ರದ ಅಧ್ಯಯನವು ಉತ್ತಮ ನಾಗರೀಕನನ್ನು ರೂಪಿಸುತ್ತದೆ”
“ಕಲಾವಿಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಮತ್ತು ಉದ್ಯೋಗದಲ್ಲಿ ಹಲವಾರು ಅವಕಾಶಗಳಿದೆ. ಅದರಲ್ಲಿಯೂ ರಾಜ್ಯಶಾಸ್ತ್ರದ ಅಧ್ಯಯನವು ಉತ್ತಮ ನಾಗರೀಕನನ್ನು ರೂಪಿಸುವುದರ ಜೊತೆಗೆ ಉತ್ತಮ ಭವಿಷ್ಯವನ್ನು ರೂಪಿಸುತ್ತದೆ. ಈ ದಿಶೆಯಲ್ಲಿ ಉಪನ್ಯಾಸಕರು ರಾಜ್ಯಶಾಸ್ತ್ರ ಬೋಧನೆಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ತಮ್ಮನ್ನು ತಾವು ತಯಾರಿ ಮಾಡಿಕೊಳ್ಳಬೇಕು”. ಎಂದು ಡಾ. ಶುಭಕರಾಚಾರಿ, ಪ್ರಾಂಶುಪಾಲರು ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಅವರು ಹೇಳಿದರು . ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ನಡೆದ ಉಡುಪಿ ಜಿಲ್ಲಾ ರಾಜ್ಯಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘದ ಪುನಶ್ಚೇತನ ಕಾರ್ಯಗಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಶೆಟ್ಟಿ ಅವರು ಮಾತನಾಡಿ “ರಾಜ್ಯಶಾಸ್ತ್ರ ಪ್ರಚಲಿತ ವಿಷಯಗಳನ್ನು ಬೋಧಿಸುವಂಥ ವಿಷಯವಾಗಿದೆ .ಸುಖೀ ರಾಜ್ಯದ ರಚನೆಗೆ, ರಾಜಕೀಯ ಜ್ಞಾನದ ಬೆಳವಣಿಗೆಗೆ ಈ ವಿಷಯದ ಅಧ್ಯಯನವೂ ಪ್ರಾಮುಖ್ಯವಾಗಿದೆ. ಇಂದಿನ ವಿದ್ಯಾರ್ಥಿಗಳು ಜಾಲತಾಣದಿಂದ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ ಆದುದರಿಂದ ಉಪನ್ಯಾಸಕರು ಸಹ ಈ ತಂತ್ರಜ್ಞಾನವನ್ನು ಬಳಸಿ ಸಿದ್ಧತೆಗಳನ್ನು ಮಾಡಿಕೊಂಡು ತರಗತಿಗಳನ್ನು ನಡೆಸಿದಲ್ಲಿ ಯಶಸ್ವಿ ಉಪನ್ಯಾಸಕರಾಗಬಹುದು” ಎಂದು ಹೇಳಿದರು . ಉತ್ತಮ ಫಲಿತಾಂಶವನ್ನು ಪಡೆದ ರಾಜ್ಯಶಾಸ್ತ್ರ ವಿಷಯದ ಎಲ್ಲಾ ಉಪನ್ಯಾಸಕರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಚಂದ್ರನಾಥ್ ಎಂ ಸರಕಾರಿ ಪದವಿ ಪೂರ್ವ ಕಾಲೇಜು,ಚೇಳಾ,ರು ಸಂಘದ ಗೌರವ ಅಧ್ಯಕ್ಷರಾದ ಶ್ರೀವಾಸು ಮೊಗವೀರ, ಅಧ್ಯಕ್ಷರಾದ ಎಡ್ವರ್ಡ್ ಲಾರ್ಸನ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರು ಸಂಘದ ಗೌರವ ಸಲಹೆಗಾರರಾದ ಶ್ರೀ ಕೆ ಪಿ ಎಸ್ ಕೋಟೇಶ್ವರದ ಉಪನ್ಯಾಸಕ ಹರೀಶ್ ಬಿ ನಾಯಕ್ ಅವರು ಸ್ವಾಗತಿಸಿ, ಕಾರ್ಯದರ್ಶಿ ಕೊಲ್ಲೂರು ಮೂಕಾಂಬಿಕ ಪ ಪೂ ಕಾಲೇಜಿನ ಉಪನ್ಯಾಸಕಿ ಸಂಗೀತ ಶೆಟ್ಟಿ ವಂದಿಸಿ ಗೋಳಿಯಂಗಡಿ ಸ .ಪ . ಪೂ. ಕಾಲೇಜಿನ ಉಪನ್ಯಾಸಕ ಪ್ರಕಾಶ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

ವಿಶೇಷವಾಗಿ ಎಲ್ಲಾ ಉಪನ್ಯಾಸಕರಿಗೆ ಹಾಗೂ ರಾಜ್ಯಶಾಸ್ತ್ರದ ಎಲ್ಲಾ ವಿದ್ಯಾರ್ಥಿಗಳಿಗೆ.. ಸಂವಿಧಾನ ಓದು ಪುಸ್ತಕವನ್ನು ನೀಡಲು ಶ್ರೀಮತಿ ಸಂಧ್ಯಾ ನಾಯಕ್ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಸಹಕಾರಕ್ಕೆ ಅಭಿನಂದಿಸಲಾಯಿತು. ರಾಜ್ಯಶಾಸ್ತ್ರ ಉಪನ್ಯಾಸಕ ಹಾಗೂ ಸಂಘದ ನಿಕಟಪೂರ್ವ ಅಧ್ಯಕ್ಷರಾದ ದಯಾನಂದ್ ಉಪಸ್ಥಿತಿಯಲ್ಲಿ ಬೈಂದೂರು ಕಾಲೇಜಿನ ಪ್ರಭಾರ ಪ್ರಾಚಾರ್ಯ ಶ್ರೀ ವೆಂಕಟರಮಣ ನಾಯಕ್ ಪ್ರಾರ್ಥಿಸಿದರು.ಉಪನ್ಯಾಸಕ ಶ್ರೀ ರಾಘವೇಂದ್ರ ಕಿಣಿ ಅತಿಥಿಗಳನ್ನು ಪರಿಚಯಿಸಿದರು.
ನಂತರ ಪ್ರಸ್ತುತ ಭಾರತದ ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳ ಬಗ್ಗೆ ಡಾ. ಶುಭಕಾಚಾರಿ ಹಾಗೂ ರಾಜ್ಯಶಾಸ್ತ್ರದ ಬೋಧನೆಯ ನವೀನ ಮಾರ್ಗಗಳು ಎಂಬ ವಿಷಯದ ಬಗ್ಗೆ ಶ್ರೀ ಚಂದ್ರನಾಥ ಎಂ ವಿಷಯ ಮಂಡನೆ ಮಾಡಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ವಿಷಯದ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹಾಜರಿದ್ದರು.
ಇದೇ ಸಂದರ್ಭದಲ್ಲಿ 2025 26 ನೇ ಸಾಲಿನ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು.
ಗೌರವ ಅಧ್ಯಕ್ಷರು: ಶ್ರೀ ವಾಸು ಮೊಗವೀರ ಗೌರವ ಸಲಹೆಗಾರರು: ಶ್ರೀ ಹರೀಶ್ ಬಿ ನಾಯಕ್
ಅಧ್ಯಕ್ಷರು: ಶ್ರೀ ಎಡ್ವರ್ಡ್ ಲಾರ್ಸನ್ ಡಿಸೋಜಾ ಕಾರ್ಯದರ್ಶಿ: ಶ್ರೀಮತಿ ಸಂಗೀತ ಶೆಟ್ಟಿ
ಖಜಾಂಚಿ: ಶ್ರೀ ವಿಜಯಕುಮಾರ್ ತಾಲೂಕು ಪದಾಧಿಕಾರಿಗಳಾಗಿ ಕಾರ್ಕಳ: ಶ್ರೀ ನೇಮಿರಾಜ ಶೆಟ್ಟಿ
ಕಾಪು :ಸುಜಾತ ನಾಯಕ್
ಕುಂದಾಪುರ:ಶ್ರೀಮತಿ ಸಂದ್ಯಾ ನಾಯಕ್
ಹೆಬ್ರಿ : ಶ್ರೀ ಜಗದೀಶ್
ಬೈಂದೂರು :ರವಿ ನಾಯಕ್
ಬ್ರಹ್ಮಾವರ :ಕೃಷ್ಣ
ಉಡುಪಿ: ಪರಮೇಶ್ವರ ನಾಯಕ್ ಇವರು ಆಯ್ಕೆಗೊಂಡರು








Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now