
ಮುಂಬಯಿ, ಜು.೧೯: ಬಂಟ್ಸ್ ಸಂಘ ಮುಂಬಯಿ, ಆಹಾರ್ ನಿಯೋಗವು ಇಂದಿಲ್ಲಿ ಶನಿವಾರ ಉಪ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ವಾಲ್ಕೆಶ್ವರದಲ್ಲಿನ ಮುಕ್ತಗಿರಿ ನಿವಾಸದಲ್ಲಿ ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮನವಿ ಸಲ್ಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿತು.
ಶಾಸಕರ ಹೇಳಿಕೆಯಿಂದ ನಿಮ್ನ ಮನಸ್ಸುಗಳಿಗೆ ಬೇಜಾರು ಆಗಿರುವುದು ನಮಗೂ ಬೇಸರವಾಗಿದೆ. ತಾವೆಲ್ಲರೂ ತಿಳಿದ ಮತ್ತು ಮುಂದುವರಿದವರಾಗಿದ್ದು, ಒಂದು ಕ್ಯಾಂಟೀನ್, ಹೊಟೇಲ್‌ನಲ್ಲಿ ಇಂತಹ ಅಹಿತಕರ ಘಟನೆಗಳು ನಡೆದಾಗ ಎಲ್ಲರ ಸಮಸ್ಯೆ ಎಂದು ತಿಳಿಯದೆ ಕ್ರಮಕ್ಕಾಗಿ ತಿಳಿಸಿ ಪರಿಹಾರ ಕಂಡುಕೊಳ್ಳಬೇಕು. ನಾವೂ ಶಾಸಕರನ್ನು ಅದೇ ರಾತ್ರಿ ತರಾಟೆಗೆ ತೆಗೆದುಕೊಂಡು ಘಟನೆಯನ್ನು ಖಂಡಿಸಿ ರಾಜೀನಾಮೆ ಕೇಳಿದ್ದೇವೆ, ಅಂತೆಯೇ ಅದೇ ರಾತ್ರಿ ಕ್ಯಾಂಟೀನ್‌ನ್ನು ತೆರೆಸಿದ್ದೇವೆ. ಮತ್ತೆ ಪುನರಾವರ್ತನೆ ಆಗದಂತೆ ಎಲ್ಲರಲ್ಲೂ ತಿಳಿಸಿದ್ದೇವೆ. ಸರ್ಕಾರ ನಿಮ್ಮೊಂದಿಗೆ ಸದಾ ಇರಲಿದ್ದು ತಾವೂ ನಮ್ಮೊಂದಿಗೆ ಸಾಥ್ ನೀಡುವಿರಿ ಅನ್ನುವ ಭರವಸೆ ನಮಗಿದೆ ಎಂದರು.
ಮಾಜಿ ಸಂಸದ ಗೋಪಾಲ್ ಸಿ. ಶೆಟ್ಟಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಉಪಮುಖ್ಯಮಂತ್ರಿ ಅವರು ಬಂಟರ ಸದ್ಯದ ವಿಚಾರದ ಬಗ್ಗೆ ಮುಂದುವರಿಯದೆ ಸಹಿ ಅಭಿಯಾನವನ್ನು ಕೈ ಬಿಡುವಂತೆ ತಿಳಿಸಿದರು.
ಹೊಟೇಲು ಉದ್ಯಮ ಮತ್ತು ಉದ್ಯಮಿಗಳ ಸಮಸ್ಯೆ, ಸಂಕಷ್ಟಗಳೇನು ಎಂಬುದು ನಾನು ಸಾಮಿಪ್ಯದಿಂದ ಕಂಡವನಾಗಿದ್ದೇನೆ. ಹೊಟೇಲಿಗರ ಸಮಸ್ಯೆಗಳ ಬಗ್ಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳುವ ಭರವಸೆ ಡಿಸಿಎಂ ನೀಡಿದ್ದು, ಮುಂಬಯಿವಾಸಿ ಬಂಟರ ಮತ್ತು ದಕ್ಷಿಣ ಭಾರತೀಯರ ಸಮಸ್ಯೆಗಳ ಪರಿಹಾರಕ್ಕೆ ನಿಮ್ಮ ಪ್ರತಿನಿಧಿಯಾಗಿ ಮಿಲಿಂದ್ ದೇವ್ರ ಅವರಿಗೆ ಜವಾಬ್ದಾರಿ ವಹಿಸುವಂತೆ ಡಿಸಿಎಂ ತಿಳಿಸಿದರು ಎಂದು ಬಂಟ ಧುರೀಣ, ಆಹಾರ್ ಮಾಜಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ಮಿಲಿಂದ್ ದೇವ್ರಾ, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ, ಮಾಜಿ ಅಧ್ಯಕ್ಷ ಡಾ| ಪಿ. ವಿ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ಆಹಾರ್ ಅಧ್ಯಕ್ಷ ಸುಧಾಕರ್ ಶೆಟ್ಟಿ, ಕಾರ್ಯದರ್ಶಿ ವಿಜಯ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಡಾ| ಸತೀಶ್ ಶೆಟ್ಟಿ, ಹೊಟೇಲು ಉದ್ಯಮಿ ಸೂರ್ಯಕಾಂತ್ ಜೆ. ಸುವರ್ಣ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























