
ಪುತ್ತೂರು: ಪುತ್ತೂರು ಪಡೀಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಶಾಂತ್ ಎಂಟರ್ಪ್ರೈಸಸ್ ಗೆ ಸತತ ಎರಡನೇ ಬಾರಿಗೆ ‘Steller Club Ruby’ ಅವಾರ್ಡ್ ಲಭಿಸಿದೆ
JSW ವತಿಯಿಂದ ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ JSW ಪೈಂಟ್ಸ್ ನ ಸಿಇಒ ಆಶೀಶ್ ರೈ, ಸೀನಿಯರ್ ವೈಸ್ ಪ್ರೆಸಿಡೆಂಟ್ ಶ್ರೀ ವಾಟ್ಸಾನ್, ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ತಿರುಮಲ್ ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಶಾಂತ್ ಎಂಟರ್ಪ್ರೈಸಸ್ ನ ಪಾಲುದಾರರಾದ ಪ್ರಶಾಂತ್ ಶೆಣೈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಾಂತ್ ಶೆಣೈ ಮತ್ತು ಪತ್ನಿ ಅಕ್ಷತಾ ಶೆಣೈ ಪಾಲುದಾರಿಕೆಯಲ್ಲಿ ಹಲವು ವರ್ಷಗಳಿಂದ ಪಡೀಲ್ ನಲ್ಲಿ ಪೈಂಟ್ ಮಳಿಗೆ ಹೊಂದಿ ಉದ್ಯಮ ನಡೆಸುತ್ತಿದ್ದಾರೆ.
ಪುತ್ತೂರಿನ ಬನ್ನೂರು ನಿವಾಸಿಯಾಗಿರುವ ಪ್ರಶಾಂತ್ ಶೆಣೈ ಮತ್ತು ಅಕ್ಷತಾ ಶೆಣೈ ಯವರು ಮಗ ಪವನ್ ಶೆಣೈ ನೊಂದಿಗೆ ವಾಸವಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಎಲ್ಲರ ಪ್ರೋತ್ಸಾಹದಿಂದ ನನಗೆ ಈ ಪ್ರಶಸ್ತಿ ಲಭಿಸಿದೆ ಇದಕ್ಕೆ ಕಾರಣರಾದ ಇಂಜೀನೀಯರ್ಸ್, ಪೈಂಟರ್ಸ್ ಮತ್ತು ಎಲ್ಲಾ ಗ್ರಾಹಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























