
ಉಡುಪಿ ಜೂ 28 ; ಸರಕಾರಿ ಮಾದರಿ. ಹಿರಿಯ ಪ್ರಾಥಮಿಕ ಶಾಲೆ ಒಳಕಾಡು ಶಾಲೆಗೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಇವರ ಶಿಫರಾಸಿನ ಮೇರೆಗೆ ಮಂಜೂರಾದ MRPL ನ CSR ಯೋಜನೆಯ ಅನುದಾನದಲ್ಲಿ ನಿರ್ಮಾಣಗೊಂಡ ಹುಡುಗ ಮತ್ತು ಹುಡುಗಿಯರ ಶೌಚಾಲಯದ ಹಸ್ತಾಂತರ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ MRPL ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಶ್ರೀ ದಯಾನಂದ ಪ್ರಭು ,ನಗರಸಭಾ ಉಪಾಧ್ಯಕ್ಷರಾದ ಶ್ರೀಮತಿ ರಜನಿ ಹೆಬ್ಬಾರ್,ಕ್ಷೇತ್ರಶಿಕ್ಷಣಾಧಿಕಾರಿಗಳಾದ
ಡಾ.ಎಲ್ಲಮ್ಮ,SDMC ಅಧ್ಯಕ್ಷರಾದ ಡಾ.ವಿರೂಪಾಕ್ಷ ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಶೇಟ್, ಪ್ರೌಢಶಾಲಾ SDMC ಅಧ್ಯಕ್ಷರಾದ ರಮೇಶ ಹೆಗಡೆ, ZP ಉಪಾಧ್ಯಕ್ಷರು ನಾಗಭೂಷಣ ಶೇಟ್ ಶ್ರೀಪ್ರಕಾಶ್ ಚಂದ್ರ ,MR ಹೆಗ್ಡೆ, ತಾರಾದೇವಿ, ಗಣೇಶ್ ಕುಮಾರ್, ಸೌಮ್ಯ ಶೇಟ್, ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪೂರ್ಣಿಮಾ ಶಿಕ್ಷಕ ವೃಂದ, ಸಮಿತಿಯ ಸದಸ್ಯರು , ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಕುಸುಮ G ಮೆಂಡನ್ ಸ್ವಾಗತಿಸಿ ಶ್ರೀಮತಿ ಮಾಲಿನಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿ ಶ್ರೀಮತಿ ವಿನಯ ವಂದಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























