
ಎ.8: ಉಡುಪಿ ಕಲ್ಯಾಣಪುರ ಮೂಡುಕುದ್ರು ಬೊಬ್ಬರ್ಯಮುಂಡ ಶ್ರೀ ಬೊಬ್ಬರ್ಯ ದೈವಸ್ಥಾನ, ಶ್ರೀ ಸ್ವಾಮಿ ಕೊರಗಜ್ಜ ಮತ್ತು ಶ್ರೀ ನಾಗದೇ ವರ ಸನ್ನಿಧಿಯ ಪುನಃ ಪ್ರತಿಷ್ಠೆ ಬ್ರಹ್ಮ ಕುಂಭಾಭಿಷೇಕ ಹಾಗೂ ನೇಮ ಎ. 8ರಿಂದ ಎ. 10ರ ವರೆಗೆ ಜರಗಲಿದೆ.
ಎ. 8ರಂದು ಸಂಜೆ 4.30ಕ್ಕೆ ಮೂಡುಕುದ್ರು ಶ್ರೀ vಪರಮೇಶ್ವರೀ ಮಠದಿಂದ ಹೊರೆ ಕಾಣಿಕೆ ಮೆರವಣಿಗೆ, 5.30ಕ್ಕೆ ಸಾಮೂ ಹಿಕ ಫಲನ್ಯಾಸ, ಪ್ರಾರ್ಥನೆ, ಗೇಹ ಪ್ರತಿಗ್ರಹ ಬಿಂಬಪ್ರತಿಗ್ರಹ, ಪುಣ್ಯಾಹ ವಾಚನ, ಸಪ್ತಶುದ್ಧಿ ಪ್ರಾಕಾರ ಶುದ್ಧಿ, ವಾಸ್ತು ಪೂಜಾ ಬಲಿ, ದಿಕ್ಟಲಿ, ರಾಕೋಘ್ನ ಹೋಮ, ಪ್ರತಿಷ್ಠಾ ಹೋಮ, ಬಿಂಬಶುದ್ದಿ ಪೂಜಾ, ಶಯ್ಯಾ ಕಲ್ಪನ ಪ್ರಸಾದ ವಿತರಣೆ, ಎ. 9ರಂದು ನವಗ್ರಹ ಪೂಜೆ, ಪಂಚವಿಂಶತಿ ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಪ್ರಧಾನ ಅಧಿವಾಸ ಹೋಮ, ಶ್ರೀ ಬೊಬ್ಬರ್ಯ, ಶ್ರೀ ಸ್ವಾಮಿ ಕೊರಗಜ್ಜ ಶ್ರೀ ನಾಗದೇವರ ಪ್ರತಿಷ್ಠೆ ನಿದ್ರಾ ಕಲಶಾಭಿಷೇಕ, ಜೀವ ಕುಂಭಾಭಿಷೇಕ, ಮಹಾಪೂಜೆ, ಧರ್ಮ ದೈವಗಳ ದರ್ಶನ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ, ಎ.10ರ ಬೆಳಗ್ಗೆ 9ಕ್ಕೆ ದೇವತಾ ಕಾರ್ಯಕ್ರಮ, 9.30ಕ್ಕೆ ಬೊಬ್ಬರ್ಯ, ಸ್ವಾಮಿ ಕೊರಗಜ್ಜ ದೈವಗಳ ಸಿರಿ ಸಿಂಗಾರದ ನೇಮ ನಡೆಯಲಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್, ಕಾರ್ಯಾಧ್ಯಕ್ಷ ದಾಮೋದರ ಪಿ. ತಿಳಿಸಿದ್ದಾರೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now