ಬೆಳ್ಮಣ್‌ನಲ್ಲಿ ನೂತನ ಕೊಂಕಣಿ ಚಲನಚಿತ್ರ “ಗರ್ನಲ್” ಚಿತ್ರದ ಮುಹೂರ್ತ ಸಮಾರಂಭ

ಬೆಳ್ಮಣ್‌ನಲ್ಲಿ ನೂತನ ಕೊಂಕಣಿ ಚಲನಚಿತ್ರ “ಗರ್ನಲ್” ಚಿತ್ರದ ಮುಹೂರ್ತ ಸಮಾರಂಭ
0Shares

ಬೆಳ್ಮಣ್, ನವೆಂಬರ್ 20: ರಾಯನ್ ಮ್ಯಾಗ್ನೆಟೋ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕೊಂಕಣಿ ಚಲನಚಿತ್ರ ‘’ಗರ್ನಲ್” ಚಿತ್ರದ ಮುಹೂರ್ತ ಸಮಾರಂಭವು ನವೆಂಬರ್ 20ರಂದು ಬೆಳ್ಮಣ್‌ನಲ್ಲಿ ಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ನೆರವೇರಿತು.

ಬೆಳ್ಮಣ್ ಚರ್ಚ್‌ನ ಸಹಾಯಕ ಧರ್ಮಗುರು ವಂದನೀಯ ಫಾದರ್ ಓಸ್ವಾಲ್ಡ್ ವಾಸ್ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಚಿತ್ರಕ್ಕೆ ಆಶೀರ್ವಚನ ನೀಡುವ ಮೂಲಕ ಮುಹೂರ್ತ ಸಮಾರಂಭಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ, ಕಥೆಗಾರ ಹಾಗೂ ಸಂಕಲನಕಾರ ರಾಯನ್ ಮ್ಯಾಗ್ನೆಟೋ, ಸಹ-ಕಥೆಗಾರ ಹಾಗೂ ನಿರ್ಮಾಣ ವ್ಯವಸ್ಥಾಪಕ ಡಾ. ಮೆಲ್ವಿನ್ ಪೆರ್ನಾಲ್, ಛಾಯಾಗ್ರಹಣ ನಿರ್ದೇಶಕ (DoP) ಶಿವಶಂಕರ್ ನೂರಂಬಾಡ ಸೇರಿದಂತೆ ಚಿತ್ರದ ಕಲಾವಿದರು ಹಾಗೂ ತಾಂತ್ರಿಕ ತಂಡದ ಸದಸ್ಯರು ಉಪಸ್ಥಿತರಿದ್ದರು.

ಈ ಚಿತ್ರದ ವಿಶೇಷತೆಯೆಂದರೆ, ಬರೋಬ್ಬರಿ 170ಕ್ಕೂ ಅಧಿಕ ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಕೊಂಕಣಿ ಚಲನಚಿತ್ರಗಳಲ್ಲಿ ಒಂದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now