ಪೀಡಿಯಾಟ್ರಿಕ್ ಕಾರ್ಡಿಯಾಲಜಿ – ಬ್ಯಾಕ್ ಟು ಬೇಸಿಕ್ಸ್” ವಿಷಯದಲ್ಲಿ 17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್

ಪೀಡಿಯಾಟ್ರಿಕ್ ಕಾರ್ಡಿಯಾಲಜಿ – ಬ್ಯಾಕ್ ಟು ಬೇಸಿಕ್ಸ್” ವಿಷಯದಲ್ಲಿ 17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್
0Shares

ಮಾಹೆ ಮಣಿಪಾಲದಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 50ಕ್ಕೂ ಹೆಚ್ಚು ಅಧ್ಯಾಪಕರು ಭಾಗಿ

ಮಣಿಪಾಲ, 16 ನವೆಂಬರ್ 2026: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಹೃದ್ರೋಗ ವಿಭಾಗವು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ (ಮಾಹೆ) ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್‌ನ (ಎಂಸಿಎಚ್‌ಪಿ) ಕಾರ್ಡಿಯೋವ್ಯಾಸ್ಕ್ಯುಲರ್ ಟೆಕ್ನಾಲಜಿ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ 17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್ ಇಂದು ಮಾಹೆಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ನಡೆಯಿತು. ಈ ಬಾರಿಯ ವಿಷಯ “ಪೀಡಿಯಾಟ್ರಿಕ್ ಕಾರ್ಡಿಯಾಲಜಿ – ಬ್ಯಾಕ್ ಟು ಬೇಸಿಕ್ಸ್” (ಮಕ್ಕಳ ಹೃದ್ರೋಗಶಾಸ್ತ್ರ – ಮೂಲ ತತ್ವಗಳತ್ತ).

ಕೇರಳದ ಶ್ರೀ ಚಿತ್ರಾ ತಿರುನಾಳ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿಯ ಹೃದ್ರೋಗ ವಿಭಾಗದ ಮಾಜಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಜಗನ್ಮೋಹನ್ ತಾರಕನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಹೆಯ ಎಂಸಿಎಚ್‌ಪಿ ಡೀನ್ ಡಾ. ಜಿ. ಅರುಣ್ ಮಯ್ಯ ಗೌರವ ಅತಿಥಿಯಾಗಿದ್ದರು.

ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಹಾಗೂ ಸಂಘಟನಾ ಅಧ್ಯಕ್ಷರಾದ ಡಾ. ಗಣೇಶ್ ಪಿ. ಸ್ವಾಗತಿಸಿದರು. ಮುಖ್ಯ ಅತಿಥಿ ಡಾ. ಜಗನ್ಮೋಹನ್ ತರಕನ್ ಅವರು ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿ, ಉಪಯುಕ್ತ ವಿಚಾರಗಳನ್ನು ಹಂಚಿಕೊಂಡರು. ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ. ಮುಕುಂದ್ ಎ. ಪ್ರಭು ವಂದಿಸಿದರು.

ಡಾ. ಗಣೇಶ್ ಪಿ., ಡಾ. ಮುಕುಂದ್ ಎ. ಪ್ರಭು, ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸ್ಯಾವಿಯೋ ಡಿಸೋಜ ಹಾಗೂ ಮಾಹೆಯ ಎಂಸಿಎಚ್‌ಪಿ ಕಾರ್ಡಿಯೋವ್ಯಾಸ್ಕ್ಯುಲರ್ ಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಕೃಷ್ಣಾನಂದ ನಾಯಕ್ ಸಂಘಟನಾ ಸಮಿತಿಯಲ್ಲಿದ್ದರು.

ಸಮ್ಮೇಳನವು ಆಫ್‌ಲೈನ್ ಮಾದರಿಯಲ್ಲಿ ನಡೆಯಿತು. ದೇಶದ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಖ್ಯಾತ ತಜ್ಞರು ಮಕ್ಕಳ ಹೃದ್ರೋಗಶಾಸ್ತ್ರದ ವಿವಿಧ ವಿಷಯಗಳ ಕುರಿತು ಮಾತನಾಡಿ, ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿವಿಧ ಸಂಸ್ಥೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 50ಕ್ಕೂ ಹೆಚ್ಚು ಅಧ್ಯಾಪಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಕ್ಕಳ ಹೃದಯ ಆರೈಕೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ವೈದ್ಯರಲ್ಲಿ ಹೆಚ್ಚುತ್ತಿರುವ ಆಸಕ್ತಿಗೆ ಇದು ಸಾಕ್ಷಿಯಾಗಿದೆ.
ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ಪೋಸ್ಟರ್ ಮತ್ತು ಮೌಖಿಕ ಪ್ರಬಂಧ ಮಂಡನೆ ಅವಧಿಗಳನ್ನು ಏರ್ಪಡಿಸಲಾಗಿತ್ತು. ಭಾಗವಹಿಸಿದವರು ಕ್ಲಿನಿಕಲ್ ಪ್ರಕರಣ ಅಧ್ಯಯನಗಳು ಹಾಗೂ ಮೂಲ ಸಂಶೋಧನಾ ಕೆಲಸಗಳನ್ನು ಮಂಡಿಸಿದರು. 40ಕ್ಕೂ ಹೆಚ್ಚು ಸಾರಾಂಶಗಳನ್ನು (ಅಬ್‌ಸ್ಟ್ರ್ಯಾಕ್ಟ್) ಮಂಡನೆಗೆ ಆಯ್ಕೆ ಮಾಡಲಾಗಿತ್ತು. ಮಂಡನೆಗಳನ್ನು ಮೂರು ವಿಭಾಗಗಳಲ್ಲಿ ಮೌಲ್ಯಮಾಪನ ಮಾಡಿ, ಅತ್ಯುತ್ತಮ ಪ್ರಬಂಧ ಹಾಗೂ ಪೋಸ್ಟರ್‌ಗಳಿಗೆ ಬಹುಮಾನ ನೀಡಲಾಯಿತು.

ಡಾ. ಅರುಣ್ ಕುಸುಗಲ್ ಮತ್ತು ಡಾ. ಎಸ್.ಜಿ.ಎಸ್. ಪ್ರಭು ಅವರ ಸ್ಮರಣಾರ್ಥ ನಡೆದ ಸಂವಾದಾತ್ಮಕ ಕಾರ್ಡಿಯಾಲಜಿ ರಸಪ್ರಶ್ನೆ ಸ್ಪರ್ಧೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಭಾಗವಹಿಸಿದವರು ತಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಲು, ಒಟ್ಟಾಗಿ ಕಲಿಯಲು ಹಾಗೂ ಹೃದ್ರೋಗಶಾಸ್ತ್ರದ ಪ್ರಮುಖ ಪರಿಕಲ್ಪನೆಗಳನ್ನು ಮನನ ಮಾಡಿಕೊಳ್ಳಲು ಈ ರಸಪ್ರಶ್ನೆ ನೆರವಾಯಿತು.

17ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಆರೋಗ್ಯ ವೃತ್ತಿಪರರಿಗೆ ಜ್ಞಾನ ಹಂಚಿಕೊಳ್ಳಲು, ಕ್ಲಿನಿಕಲ್ ಅನುಭವಗಳನ್ನು ಚರ್ಚಿಸಲು ಹಾಗೂ ಮಕ್ಕಳ ಹೃದ್ರೋಗಶಾಸ್ತ್ರದ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆಯಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now