IPL 2025: ಬಿಸಿಸಿಐ ನಿಯಮದಂತೆ ತಂಡದ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಿರುವ ರಾಹುಲ್ ದ್ರಾವಿಡ್, ಮುಂದಿನ ಆವೃತ್ತಿಯ ಹರಾಜಿಗೂ ಮುನ್ನ ತಂಡದಲ್ಲಿ 6 ಆಟಗಾರರನ್ನು ಉಳಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಅದರಂತೆ ತಂಡದ ನಾಯಕ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಸಂದೀಪ್ ಶರ್ಮಾ, ಶಿಮ್ರಾನ್ ಹೆಟ್ಮಾಯರ್ ಹಾಗೂ ಧೃವ್ ಜುರೇಲ್ ಅವರನ್ನು ಉಳಿಸಿಕೊಳ್ಳುವಲ್ಲಿ ಫ್ರಾಂಚೈಸಿ ಯಶಸ್ವಿಯಾಗಿದೆ.
ಟೀಂ ಇಂಡಿಯಾವನ್ನು ಟಿ20 ಚಾಂಪಿಯನ್ ಮಾಡಿದ ಬಳಿಕ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯನ್ನು ತೊರೆದಿದ್ದ ಕನ್ನಡಿಗ ರಾಹುಲ್ ದ್ರಾವಿಡ್, ಮತ್ತೊಮ್ಮೆ ಐಪಿಎಲ್ ಅಖಾಡಕ್ಕಿಳಿದಿದ್ದಾರೆ. ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ರಾಹುಲ್ ದ್ರಾವಿಡ್ಗೆ ಬಲಿಷ್ಠ ತಂಡವನ್ನು ಕಟ್ಟುವ ಸವಾಲು ಎದುರಾಗಿದೆ. ಇದಲ್ಲದೆ ಧಾರಣ ಪಟ್ಟಿಯಲ್ಲಿ ಯಾರಿಗೆಲ್ಲ ಅವಕಾಶ ನೀಡಬೇಕು ಎಂಬುದು ಕೂಡ ತಲೆನೋವಾಗಿದೆ. ಆದಾಗ್ಯೂ ಬಿಸಿಸಿಐ ನಿಯಮದಂತೆ ತಂಡದ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಿರುವ ರಾಹುಲ್ ದ್ರಾವಿಡ್, ಮುಂದಿನ ಆವೃತ್ತಿಯ ಹರಾಜಿಗೂ ಮುನ್ನ ತಂಡದಲ್ಲಿ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಅದರಂತೆ ತಂಡದ ನಾಯಕ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಮತ್ತು ಸಂದೀಪ್ ಶರ್ಮಾ ಅವರನ್ನು ಉಳಿಸಿಕೊಳ್ಳುವಲ್ಲಿ ಫ್ರಾಂಚೈಸಿ ಯಶಸ್ವಿಯಾಗಿದೆ. ಇದರ ಜೊತೆಗೆ ಧ್ರುವ್ ಜುರೆಲ್ ಅವರ ಹೆಸರು ಕೂಡ ಚರ್ಚೆಯಲ್ಲಿದೆ. ಉಳಿದಂತೆ ಜೋಸ್ ಬಟ್ಲರ್, ಯುಜ್ವೇಂದ್ರ ಚಹಾಲ್, ಟ್ರೆಂಟ್ ಬೌಲ್ಟ್ ಮತ್ತು ರವಿಚಂದ್ರನ್ ಅಶ್ವಿನ್ ಸೇರಿದಂತೆ ಉಳಿದ ಆಟಗಾರರು ಹರಾಜಿಗೆ ಬಿಡುಗಡೆಯಾಗಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now