
ಉಡುಪಿ: ಕರಾವಳಿ ಕ್ರೈಸ್ತ ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆ (Karavali Christian Chamber of Commerce and Industry), ಉಡುಪಿಯ ‘ಪ್ರೇರಣಾ’ ಸಂಸ್ಥೆಯ ವತಿಯಿಂದ ಆದಾಯ ತೆರಿಗೆ (Income Tax) ಕುರಿತು ಕಾರ್ಯಾಗಾರವು ನವೆಂಬರ್ 1 ಸಾಯಂಕಾಲ 4.30 ಕ್ಕೆ ಮಾಂಡವಿ ಟ್ರೇಡ್ ಸೆಂಟರ್ನಲ್ಲಿ ನಡೆಯಿತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ CA ಪ್ರಿತೇಶ್ ಬರ್ಟನ್ ಡಿಸೋಜಾ,( FCA, ACCA (UK), B.Com, LLB) ಅವರು ಆದಾಯ ತೆರಿಗೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಆದಾಯ ತೆರಿಗೆ ಹೊಸ ನಿಯಮಗಳು, ಕೃಷಿ ಭೂಮಿ ಕೃಷಿಯೇತರ ಭೂಮಿಯ ತೆರಿಗೆ ಬಗ್ಗೆ, ಹಣಕಾಸು ಸಂಬಂಧಿತ ಮಾಹಿತಿ, NRI ತೆರಿಗೆ ಪಾವತಿ ಬಗ್ಗೆ ಮಾಹಿತಿ, ಇಲಾಖೆಯಿಂದ ನೋಟಿಸ್ ಬಂದರೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು, ತೆರಿಗೆ ಪಾವತಿ ವಿಧಾನಗಳು ಹಾಗೂ ತೆರಿಗೆಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ವಿವರವಾಗಿ ತಿಳಿಸಿಕೊಟ್ಟರು.

ಡಾಲ್ಫಿ ಪಿ. ಮಸ್ಕರೇನ್ಹಸ್ ಅವರು ಸಂಪನ್ಮೂಲ ವ್ಯಕ್ತಿ CA ಪ್ರಿತೇಶ್ ಬರ್ಟನ್ ಡೆಸ್ಸಾ ಅವರನ್ನು ಸಭೆಗೆ ಪರಿಚಯಿಸಿದರು. ಬಳಿಕ ನಡೆದ ಪ್ರಶ್ನೋತ್ತರ ಅಧಿವೇಶನದಲ್ಲಿ ಆಲ್ವಿನ್ ಕ್ವಾಡ್ರಸ್, ವಾಲ್ಟರ್ ಜೋಸೆಫ್ ಸಲ್ಡಾನ್ಹಾ ಸೇರಿದಂತೆ ಹಲವರು ಭಾಗವಹಿಸಿ ತಮ್ಮ ಸಂದೇಹಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು. ಇದು ಒಂದು ಅತಿ ಉತ್ತಮವಾದ ಹಾಗೂ ಲಾಭದಾಯಕವಾದ ಕಾರ್ಯಗಾರ ಇಂತಹ ಕಾರ್ಯಗಳನ್ನು KCCCI ಮುಂದೆ ಕೂಡ ಮಾಡಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ KCCCI ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ರವರು ಪ್ರಾಸ್ತವಿಕ ಭಾಷಣ ಮಾಡಿ CA ಪ್ರಿತೇಶ್ ಡೆಸ್ಸಾರವನ್ನು ಹೂಗೊಚ್ಚ ನೀಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಖಜಾಂಜಿಯಾದ ಮ್ಯಾಕ್ಸಿನ್ ಸಲ್ದಾನ ಕಾರ್ಯದರ್ಶಿಗಳಾದ ವಿಲ್ಸನ್ ಡಿಸೋಜ ಹಾಜರಿದ್ದರು. KCCCI ನಿರ್ದೇಶಕರು ಸೇರಿದಂತೆ ಹಲವಾರು ಉದ್ಯಮಿಗಳು ಭಾಗವಹಿಸಿದ್ದರು.

ಕಾರ್ಯದರ್ಶಿಗಳಾದ ವಿಲ್ಸನ್ ಡಿಸೋಜಾ ಅವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ಅಧ್ಯಕ್ಷರಾದ ಕ್ವಾಡ್ರಸ್ ಆಲ್ವಿನ್ ರವರು CA ಪ್ರಿತೇಶ್ ಬರ್ಟನ್ ಡೆಸ್ಸಾರವರಿಗೆ ನೆನಪಿನ ಕಾಣಿಕೆಯನ್ನು ನೀಡಿದರು



Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now