
: ಯುವವಾಹಿನಿ (ರಿ.) ಬಜಪೆ ಘಟಕದ ಪುರುಷ ಹಾಗೂ ಮಹಿಳಾ ಸದಸ್ಯರು ಮೂಡಬಿದ್ರೆಯಲ್ಲಿ ನಡೆದ ಅಂತರ್ಘಟಕ ಕ್ರಿಡೋತ್ಸವದಲ್ಲಿ ನಡೆದ ಅಥ್ಲೆಟಿಕ್ ಕ್ರೀಡೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದ ಆಟಗಾರರಿಗೆ ಗೌರವರ್ಪಣೆ ಸಲ್ಲಿಸಲಾಯಿತು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ.) ಮೂಡಬಿದ್ರೆ ಘಟಕದ ಆತಿಥ್ಯದಲ್ಲಿ ಆಳ್ವಾಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಅಂತರ್ಘಟಕ ಕ್ರೀಡಾಕೂಟದಲ್ಲಿ ನಡೆದ ಅಥ್ಲೆಟಿಕ್ ಪಂದ್ಯಾಟದಲ್ಲಿ ಹಲವು ಬಹುಮಾನಗಳನ್ನು ಪಡೆದು ಘಟಕಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದೆ.
ಅಕ್ಟೋಬರ್ 11 ರಂದು ಸಂಜೆ 05.00 ಗಂಟೆಗೆ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಬಜಪೆ ಇಲ್ಲಿ ಗುರು ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವನ್ನು ಪ್ರಾರಂಭಿಸಿ ಈ ಕಾರ್ಯಕ್ರಮದಲ್ಲಿ 100 ಮೀಟರ್ ಓಟದಲ್ಲಿ ಚಂದ್ರಶೇಖರ ಪೂಜಾರಿ ಹಾಗೂ ಲಿಶ್ಮಿತಾ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ, ದ್ವಿತೀಯ ಸ್ಥಾನ ಪಡೆದು ಬಿಂದಿಯ ಬೆಳ್ಳಿಯ ಪದಕ,
200 ಮೀಟರ್ ಓಟದಲ್ಲಿ ಲಿಶ್ಚಿತಾ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ, ನಿತಿನ್ ಹಾಗೂ ಬಿಂದಿಯ ದ್ವಿತೀಯ ಸ್ಥಾನ
ಪಡೆದು ಬೆಳ್ಳಿಯ ಪದಕ
ವೇಗದ ನಡಿಗೆಯಲ್ಲಿ ಆನಂದ ಪೂಜಾರಿ ದ್ವಿತೀಯ ಬಹುಮಾನ ಪಡೆದು ಬೆಳ್ಳಿಯ ಪದಕ ರಿಲೇ ಪಂದ್ಯಾಟದಲ್ಲಿ ಲಿಶ್ಚಿತ, ಬಿಂದಿಯ,ಜೀವಿತ ಹಾಗೂ ಯಕ್ಷಿತ ಇವರು ದ್ವಿತೀಯ ಬಹುಮಾನ ಪಡೆದು ಬೆಳ್ಳಿಯ ಪದಕಗಳನ್ನು ತನ್ನ ಮೂಡಿಗೆರಿಸಿಕೊಂಡ ಎಲ್ಲಾ ಸ್ಪರ್ಧಾಳುಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ವಿಜೇತರು ತಮ್ಮ ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಹಿತ್ ಪೂಜಾರಿ ವಹಿಸಿಕೊಂಡಿದ್ದರು.ಕ್ರೀಡಾ ಸಂಚಾಲಕರಾದ ದಯಾನಂದ ಅಮೀನ್ ಸಹ ಸಂಚಾಲಕರಾದ ನಿತೇಶ್ ಪೂಜಾರಿ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಸಂತೋಷದ ಕ್ಷಣಗಳನ್ನು ಹಂಚಿಕೊಂಡರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now