
ಮುನಿಯಾಲು : ಸಂಜೀವಿನಿ ಗೋಧಾಮದಲ್ಲಿ ರೈತಪೀಠ ಪ್ರಶಸ್ತಿ ಆಯ್ಕೆ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಒಂದು ದಿನದ ಕೃಷಿ ಅನುಶೋಧನಾ ವಿಚಾರಗೋಷ್ಠಿಯ ಕುರಿತು ಸಮಾಲೋಚನಾ ಸಭೆ ನಡೆಯಿತು.
ಕಳೆದ ವರ್ಷ ಕರ್ನಾಟಕಕ್ಕೆ ಸೀಮಿತವಾಗಿದ್ದ ಸಂಜೀವಿನಿ ಗೋಧಾಮ ರೈತಪೀಠ ನೆಲಜ್ಞಾನ, ಜೀವವೈವಿಧ್ಯ, ಸುಸ್ಥಿರ ಕೃಷಿಮಾನ್ಯ ರಾಷ್ಟ್ರೀಯ ರೈತಪೀಠ ಪ್ರಶಸ್ತಿಯನ್ನು ಈ ಬಾರಿ ದಕ್ಷಿಣ ಭಾರತಕ್ಕೆ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಂಜೀವಿನಿ ಗೋಧಾಮದ ಸಂಸ್ಥಾಪಕ ರೈತಪೀಠ ಪ್ರಶಸ್ತಿಯ ಪ್ರವರ್ತಕ ಡಾ.ಜಿ.ರಾಮಕೃಷ್ಣ ಆಚಾರ್ ಅಧ್ಯಕ್ಷತೆ ವಹಿಸಿ ವಿವಿಧ ವಿಚಾರಗಳನ್ನು ತಿಳಿಸಿದರು.
ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪ್ರಗತಿಪರ ಕೃಷಿಕ
ರನ್ನು ಗುರುತಿಸಿ, ಆರು ರಾಜ್ಯಗಳಿಂದ ಮೂರು ರೈತರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ, ತಲಾ ಒಂದು ಲಕ್ಷ ರೂಪಾಯಿ ನಗದು ಬಹುಮಾನದೊಂದಿಗೆ ಗೌರವಿಸಲು ಸಭೆ ತೀರ್ಮಾನಿಸಿತು.
ರೈತರ ಆಯ್ಕೆಯ ಮಾನದಂಡಗಳು ಹಾಗೂ ಒಂದು ದಿನದ ಕೃಷಿ ವಿಚಾರಗೋಷ್ಠಿಯ ರೂಪುರೇಷೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ರೈತಕೇಂದ್ರಿತ ಕೃಷಿ ಚಿಂತನೆ, ಅನುಭವ ವಿನಿಮಯ ಮತ್ತು ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸ
ಲಾಗುವ ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕೃಷಿ ವಿಚಾರಗೋಷ್ಠಿಯನ್ನು 2027ರ ಜನವರಿಯಲ್ಲಿ ನಡೆಸಲು ಸಭೆ ನಿರ್ಧರಿಸಿತು.
ಸಂಜೀವಿನಿ ಗೋಧಾಮದ ಸಂಸ್ಥಾಪಕ ರೈತಪೀಠ ಪ್ರಶಸ್ತಿಯ ಪ್ರವರ್ತಕ ಉದ್ಯಮಿ ಡಾ.ಜಿ.ರಾಮಕೃಷ್ಣ ಆಚಾರ್, ಸಂಜೀವಿನಿ ಗೋಧಾಮದ ಸಂಸ್ಥಾಪಕ ರೈತಪೀಠ ಪ್ರಶಸ್ತಿಯ ಪ್ರಧಾನ ಕಾರ್ಯದರ್ಶಿ ನರೇಂದ್ರ ರೈ ದೇರ್ಲ, ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಕಾರ್ಕಳ ಜ್ಞಾನಸುಧ ಶಿಕ್ಷಣ ಸಂಸ್ಥೆಯ ಸುಧಾಕರ ಶೆಟ್ಟಿ, ಮೂಡಬಿದರೆ ಆಳ್ವಾಸ್ನ ಡೀನ್ ವಾಸುದೇವ್, ಬ್ರಹ್ಮಾವರದ ಕೃಷಿ ವಿಜ್ಞಾನಿ ಡಾ. ಚೈತನ್ಯ ಹಾಗೂ ಪ್ರಗತಿಪರ ಕೃಷಿಕ ಕಜಾನೆ ಎಗ್ರಿಕಲ್ಚರಲ್ ಫಾರ್ಮ್ ಮುಖ್ಯಸ್ಥ ನಟರಾಜ್ ಹೆಗ್ಡೆ ಹಿರಿಯಡ್ಕ, ಸಂಜೀವಿನಿ ಗೋಧಾಮದ ಸಂಸ್ಥಾಪಕ ರೈತಪೀಠ ಪ್ರಶಸ್ತಿಯ ಕೋಶಾಧಿಕಾರಿ ಸವಿತಾ ಆರ್ ಆಚಾರ್, ಪ್ರಮುಖರಾದ ಡಾ. ಸುದರ್ಶನ್ ಹೆಬ್ಬಾರ್ ಮುನಿಯಾಲು,
ಸುಕೇಶ ಹೆಗ್ಡೆ ಕಡ್ತಲ, ಪ್ರಜ್ವಲ್ ಆರ್ ಆಚಾರ್, ಅನುಷಾ ಆಚಾರ್, ತೇಜಸ್ ಆರ್ ಆಚಾರ್, ರಕ್ಷತ್ ಆರ್ ಆಚಾರ್, ಅಜಿತ್, ಸಂಜಯ ಪ್ರಭು, ನಿಯಲ್, ಶ್ರೇಯಸ್, ಹೆಬ್ರಿ ನ್ಯೂಸ್ ಮಾಧ್ಯಮ ಸಂಸ್ಥೆಯ ಮಾಲಕ, ಪತ್ರಕರ್ತ ಸುಕುಮಾರ್ ಮುನಿಯಾಲ್ ಉಪಸ್ಥಿತರಿದ್ದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now