
ಅ.14ರಂದು ಮೈಸೂರಿನಲ್ಲಿ ಪ್ರದಾನ
ಉಡುಪಿ: ಮೈಸೂರು ದಸರಾ ನಿಮಿತ್ತ ಆಯೋಜಿಸಿರುವ ಕಲಾಪ್ರದರ್ಶನದಲ್ಲಿ ವೃತ್ತಿಪರ ಕಲಾವಿದರ ಪೈಟಿಂಗ್ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕಲಾವಿದರಿಬ್ಬರ ಕಲಾಕೃತಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ.
ಆರ್ಟಿಸ್ಟ್ಸ್ ಫೋರಂ (ರಿ.) ಉಡುಪಿಯ ಕಾರ್ಯದರ್ಶಿ ಹಾಗೂ ದೃಶ್ಯ ಕಲಾವಿದರಾದ ಸಕು ಪಾಂಗಾಳ ಅವರ ಕಲಾಕೃತಿ (ಶೀರ್ಷಿಕೆ ರಹಿತ)ಗೆ ಮತ್ತು ಆರ್ಟಿಸ್ಟ್ಸ್ ಫೋರಂ (ರಿ.) ಉಡುಪಿಯ ಸದಸ್ಯ ಹಾಗೂ ಖ್ಯಾತ ಕಾವಿ ಕಲಾವಿದ ಡಾ. ಜನಾರ್ದನ್ ರಾವ್ ಹಾವಂಜೆ ಅವರ ‘ಸಿಂಹ ಗಣಪತಿ’ ಕಾವಿ ಕಲಾಕೃತಿಗೆ ದಸರಾ ರಾಜ್ಯ ಪ್ರಶಸ್ತಿ ಲಭಿಸಿದೆ.
ಅ.14ರಂದು ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜ್ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಎಲ್ಲ ಕಲಾವಿದರ ಕಲಾಪ್ರದರ್ಶನ ಅ.11ರಿಂದ 24ರ ವರೆಗೆ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now