
ಕುಂದಾಪುರ: ಹರಿಯಾಣದ ಸೋನಿಪತ್ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫುಡ್ ಟೆಕ್ನಾಲಜಿ, ಎಂಟರ್ಪ್ರೆನ್ಯೂರ್ಶಿಪ್ ಆ್ಯಂಡ್ ಮ್ಯಾನೇಜ್ಮೆಂಟ್ (NIFTEM), ಕುಂಡ್ಲಿಯಲ್ಲಿ 2026ರ ಅಕ್ಟೋಬರ್ 9ರ ಶುಕ್ರವಾರ ನಡೆದ ಏಳನೇ ಘಟಿಕೋತ್ಸವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಸಮೃದ್ಧಿ ಎ. ಅವರು ಎಂ.ಟೆಕ್ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಎಂ.ಟೆಕ್ನ ಫುಡ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ (FSCM) ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದು ಪ್ರಥಮ ರ್ಯಾಂಕ್ ಗಳಿಸಿರುವ ಸಮೃದ್ಧಿ ಅವರಿಗೆ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರು ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಿದರು.
ಸಾಲಿಗ್ರಾಮದ ವೆಂಕಟೇಶ್ ಉಡುಪ ಮತ್ತು ರೇಶ್ಮಾ ಉಡುಪ ದಂಪತಿಯ ಪುತ್ರಿಯಾಗಿರುವ ಸಮೃದ್ಧಿ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ. ಪ್ರಸ್ತುತ ಅವರು ಹರಿಯಾಣದ ಸೋನಿಪತ್ನಲ್ಲಿರುವ AB InBev ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧಿಸಿದ ಈ ಮಹತ್ವದ ಯಶಸ್ಸು ಅವರ ಪರಿಶ್ರಮ, ಬದ್ಧತೆ ಮತ್ತು ಸಾಧಿಸುವ ಛಲಕ್ಕೆ ಸಾಕ್ಷಿಯಾಗಿದೆ. ಸಮೃದ್ಧಿ ಅವರ ಈ ಸಾಧನೆಯಿಂದ ಸಾಲಿಗ್ರಾಮ ಮಾತ್ರವಲ್ಲದೆ ಉಡುಪಿ ಜಿಲ್ಲೆಗೂ ಹೆಮ್ಮೆ ತಂದಂತಾಗಿದೆ.
ಸಮೃದ್ಧಿ ಅವರ ಅಮೋಘ ಸಾಧನೆಗೆ ಕುಟುಂಬದವರು, ಬಂಧುಮಿತ್ರರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿ, ಅವರ ಮುಂದಿನ ವೃತ್ತಿಜೀವನ ಮತ್ತಷ್ಟು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now