
ಬೆಂಗಳೂರು: ಐಸ್ ಕ್ರೀಂ ಪ್ರಿಯರಿಗೆ ಬಿಗ್ ಶಾಕ್
ಎದುರಾಗಿದೆ. ಐಸ್ ಕ್ರೀಂ ತಯಾರಿಕಾ ಘಟಕಗಳ ಮೇಲೆ ಎಫ್‌ಡಿಎ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ.
ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆ ಮೇರೆಗೆ ಸುಮಾರು 45 ಐಸ್ ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆದಿದೆ. ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ.
ಜಯನಗರ 3ನೇ ಬ್ಲಾಕ್‌ನಲ್ಲಿ ಐಸ್ ಕ್ರೀಂ ಘಟಕವೊಂದರ ಮೇಲೆ ದಾಳಿ ನಡೆಯಿತು. ಈ ವೇಳೆ ಅವಧಿ ಮೀರಿದ ಬ್ರಿಟಾನಿಯ ಬಿಸ್ಕೆಟ್, ನಂದಿನಿ ಸಮೃದ್ಧಿ ಮಿಲ್ಕ್, ಟೀ ಮತ್ತು ಕಾಫಿ ಮಿಕ್ಸ್ ಕೋಕನೆಟ್ ಪೌಡರ್ ಬಳಕೆ ಮಾಡ್ತಿರೋದು ಪತ್ತೆಯಾಗಿದೆ. ಲೇಬಲಿಂಗ್ ದೋಷ, FSSAI ಕಾಯ್ದೆ 2006, 2011 ಉಲ್ಲಂಘನೆಯಾಗಿದ್ದು, ಕಾನೂನು ಕ್ರಮಕೈಗೊಳ್ಳಲಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now