
ವಿಟ್ಲ: ಪುತ್ತೂರು ರಸ್ತೆಯ ಮೇಗಿನಪೇಟೆಯಲ್ಲಿ ರಸ್ತೆ ಬದಿಯ ಗುಜರಿ ರಾಶಿ ಮತ್ತು ಸ್ವಲ್ಪ ಮುಂದುಗಡೆ ವಾಹನ ಪಾರ್ಕಿಂಗ್ ಮಾಡಲಾಗುತ್ತದೆ. ಹಿಂದಿನ ಸಭೆಯ ನಿರ್ಣಯದಂತೆ ಅವುಗಳನ್ನು ತೆರವುಗೊಳಿಸಬೇಕು ಮುಲಾಜು ಬೇಡ ಎಂದು ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.
ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಸರಗೋಡು ರಸ್ತೆ, ಬದಿ ಅಡ್ಡದಬೀದಿ ರಸ್ತೆ ಬದಿ, ಕಲ್ಲಡ್ಕ ರಸ್ತೆಯ ಬೊಬ್ಬೆಕೇರಿ ರಸ್ತೆ ಬದಿ ಸಹಿತ ಅಲ್ಲಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಒಂದು ಕೋಣೆಯ ಕಟ್ಟಡಕ್ಕೆ ಅನುಮತಿ ಪಡೆದು ಮೂರು ಮೂರು ಕೊರಡಿ ನಿರ್ಮಿಸಿದವರೂ ಇದ್ದಾರೆ ಎಂದು ಸದಸ್ಯರು ದೂರಿದರು.ಅಲ್ಲಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಒಂದು ಕೋಣೆಯ ಕಟ್ಟಡಕ್ಕೆ ಅನುಮತಿ ಪಡೆದು ಮೂರು ಕೊರಡಿ ನಿರ್ಮಿಸಿದವರೂ ಇದ್ದಾರೆ ಎಂದು ಅರುಣ್ ಹೇಳಿದಾಗ ಸ್ವಪಕ್ಷದ ಜಯಂತ್, ಹರೀಶ್, ರವೀಶ್-ಪ್ರಕಾಶ್ ಮತ್ತು ಕೃಷ್ಣ ಧ್ವನಿಗೂಡಿದರು. ಪ್ರತಿಪಕ್ಷದ ಸದಸ್ಯ ಅಬ್ದುಲ್ ರಹಿಮಾನ್ ಹಸೈನಾರ್ ನೆಲ್ಲಿಗುಡ್ಡೆ ಮಾತನಾಡಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಕಾರಣ. ಹಿಂದಿನ ಸಭೆಗಳ ನಿರ್ಣಯ ಅನುಷ್ಠಾನ ಮಾಡಿದ್ದರೆ ಅನಧಿಕೃತ ಕಟ್ಟಡಗಳಿಗೆ ಅವಕಾಶ ಆಗುತ್ತಿರಲಿಲ್ಲ. ಆಗ ಸುಮ್ಮನಿದ್ದು ಈಗ ಆಫ್ತರ ಕರೆ ಅದು ಇದು ಎಂದು ಹೇಳುವುದರಲ್ಲಿ ಅರ್ಥ ಇದೆಯಾ ಎಂದು ಪ್ರಶ್ನಿಸಿದರು. ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ ಬಂದರೆ ಕೋರ್ಟಿಗೆ ಹೋಗ್ತಾರೆ. ಪಂಚಾಯಿತಿಗೆ ಇನ್ನೂ ಆ ವಿಷಯ ತರುವುದರಲ್ಲಿ ಅರ್ಥವಿಲ್ಲ ಎಂದರು. ಅವರಿಗೆ ಜತೆಗೂಡಿದ ಪ್ರತಿಪಕ್ಷ ನಾಯಕ ವಿಕೆಎಂ ಅಶ್ರಫ್ ನಿರ್ಧಾರಗಳಲ್ಲಿ ಸ್ಪಷ್ಟತೆ ಬೇಕು. ನಿರ್ಣಯಗಳನ್ನು ಜಾರಿಗೊಳಿಸದಿದ್ದರೆ ಸಭೆ ನಡೆಸುವುದು ವ್ಯರ್ಥ ಎಂದರು.
ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ವಿಧಾನ ಹಾಗೂ ಅವರು ತ್ಯಾಜ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ವಿವರಿಸಿದರು.
ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಕರುಣಾಕರ ವಿ. ಕಂದಾಯ ವಸೂಲಿಗಾರ ಚಂದ್ರಶೇಖರ ವರ್ಮ, ಆರೋಗ್ಯ ನಿರೀಕ್ಷಕ ರಾಮಚಂದ್ರ ಉಪಸ್ಥಿತರಿದ್ದರು.
ಪಟ್ಟಣ ಪಂಚಾಯಿತಿಯ ಪ್ರತಿ ವಾರ್ಡ್ ಗೆ ನೀರು ಸರಬರಾಜು ವ್ಯವಸ್ಥೆಗೆ ಅನುದಾನ ಬಿಡುಗಡೆ ಮಾಡಿಸಿ, ಅಗತ್ಯ ಕ್ರಮ ಕೈಗೊಂಡ ಶಾಸಕ ಅಶೋಕ್ ಕುಮಾರ್ ರೈ ಮತ್ತು ವಮುತುವರ್ಜಿ ವಹಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರುಣಾಕರ ವಿ. ಅವರನ್ನು ಅಭಿನಂದಿಸಲಾಯಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now