
ಪಡುಬಿದ್ರೆ : ಇಲ್ಲಿಯ ಸಮೀಪದ ಪಲಿಮಾರು ಸಂತ ಪಿಯುಸ್ X ಚರ್ಚ್ ವಠಾರದಲ್ಲಿರುವ ವಿಶಾಲ ಮತ್ತು ಸುಸಜ್ಜಿತ, ಹವಾನಿಯಂತ್ರಿತ ಸಭಾಂಗಣವು ಅಕ್ಟೋಬರ್ 4 ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆ ಗೊಳ್ಳಲಿದೆ ಎಂದು ಸಂತ ಪಿಯುಸ್ X ಚರ್ಚಿನ ಧರ್ಮಗುರುಗಳಾದ ವO. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಮಾಹಿತಿ ನೀಡಿದ್ದಾರೆ.


ಈ ಭಾಗದ ಜನರ ಬಹುದಿನದ ಕನಸು ಇದಾಗಿದ್ದು, ಈ ಸಭಾಂಗಣದಲ್ಲಿ ಏಕಕಾಲದಲ್ಲಿ 800 ಆಸನ ವ್ಯವಸ್ಥೆ ಮಾಡಲು ಅವಕಾಶ ಇದೆ. ಬೃಹದಾಕಾರದ ವೇದಿಕೆ, ಊಟದ ಸಭಾಂಗಣ, ಮಿನಿ ಹಾಲ್, ಉತ್ತಮ ಗುಣಮಟ್ಟದ ಶೌಚಾಲಯಗಳು, ಜನರೇಟರ್ ವ್ಯವಸ್ಥೆ ಮತ್ತು ವಿಶಾಲ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ. 2023ರ ಅಕ್ಟೋಬರ್ ನಲ್ಲಿ ಸಭಾಂಗಣದ ರೂಪರೇಷೆ ಮತ್ತು ಕಾಮಗಾರಿ ಕೆಲಸಗಳು ಆರಂಭವಾಗಿದ್ದು, ಇದೀಗ ಭವ್ಯವಾಗಿ ರೂಪಿತಗೊಂಡು ಉದ್ಘಾಟನೆಗೆ ಸಜ್ಜಾಗಿದೆ.

ಪಲಿಮಾರು ಚರ್ಚಿನ ಧರ್ಮ ಗುರುಗಳಾದ ಫಾ. ಜೆರಾಲ್ಡ್ ಸಂದೀಪ್ ಡಿಮೆಲ್ಲೋರವರ ಮಾರ್ಗದರ್ಶನದೊಂದಿಗೆ, ಸಭಾಭವನ ನಿರ್ಮಾಣ ಸಮಿತಿ ಸಂಚಾಲಕ ಜಿತೇಂದ್ರ ಪುಟ್ತಾರ್ಡೊರವರ ನೇತೃತ್ವದ ಕಟ್ಟಡ ಸಮಿತಿ, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷೆ ಲವೀನಾ ಸಲ್ದನಾ, ಪಾಲನಾ ಸಮಿತಿ ಮತ್ತು ಸಮಸ್ತ ಭಕ್ತಾದಿಗಳ ಸಹಕಾರದೊಂದಿಗೆ ಹಾಗೂ ವಿಶೇಷವಾಗಿ ಊರ, ಪರವೂರ ದಾನಿಗಳ ಸಹಕಾರದೊಂದಿಗೆ ಪಲಿಮಾರಿನಲ್ಲಿ ಸುಸಜ್ಜಿತ ಮತ್ತು ಭವ್ಯ ಸಭಾಭವನ ಸಿದ್ಧಗೊಂಡಿದೆ.

ಅಕ್ಟೋಬರ್ 4 ನೇ ತಾರೀಕಿನಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬೆಳಗ್ಗೆ 9:30ಕ್ಕೆ ಕೃತಜ್ಞತಾ ಬಲಿಪೂಜೆ ನಡೆಯಲಿದೆ. ಬಲಿ ಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರಾದ ಅ. ವ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾರವರು ನೆರವೇರಿಸಲಿದ್ದಾರೆ. 11 ಗಂಟೆಗೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯದ ಸಚಿವರಾದ ರಿಜ್ವಾನ್ ಅರ್ಷದ್ ನೂತನ ಸಭಾಭವನ್ನು ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಭೋಜನ ಶಾಲೆ, ಮಿನಿ ಸಭಾಭವನ ಮತ್ತು ವೇದಿಕೆಯ ಉದ್ಘಾಟನೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಮತ್ತು ಆರೋಗ್ಯ ಸಚಿವರಾದ ಯು.ಟಿ. ಖಾದರ್, ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಡಿಸಿ ಜಿನೇಂದ್ರ ಎಂ, ದಾಯ್ಜಿ ವಲ್ಡ್ ಮಾಧ್ಯಮದ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಉಡುಪಿ ಧರ್ಮ ಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಜೋರ್ ಫ್ರಾನ್ಸಿಸ್ ಲುವಿಸ್, ಕುಲಪತಿ ವಂ| ಸ್ಟೀಫನ್ ಡಿ’ಸೋಜ, ಉಪಸ್ಥಿತಿರುವರು ಪಲಿಮರು ಚರ್ಚ್ ವಟಾರ ಮತ್ತು ಆಸುಪಾಸಿನಲ್ಲಿ ತಳಿರು ತೋರಣ, ಸ್ವಾಗತ ಕಟೌಟ್ ಗಳಿಂದ ತಂಗೊಳಿಸುತ್ತಿದ್ದು, ಉದ್ಘಾಟನಾ ಸಮಾರಂಭದಲ್ಲಿ ಎರಡು ಸಾವಿರಕ್ಕೂ ಅಧಿಕ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now