
ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರ ಅವಿಶ್ರಾಂತ ಪ್ರಯತ್ನದ ಫಲವಾಗಿ ಭಾರತೀಯ ರೈಲ್ವೇ ಬೆಂಗಳೂರು ಮಂಗಳೂರು ಉಡುಪಿ ಕಾರವಾರ ಮಡಗಾಂವ್ ನಡುವೆ ಹೊಸ ವಂದೇ ಭಾರತ್ ಸಂಪರ್ಕದ ಘೋಷಣೆ ಮಾಡಿದೆ.
ಕಳೆದ ಒಂದು ವರ್ಷದಿಂದ ಈ ಕುರಿತು ಹೋರಾಡುತಿದ್ದ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಹೋರಾಟಕ್ಕೂ ಈ ಮೂಲಕ ಜಯ ಸಿಕ್ಕಂತಾಗಿದ್ದು, ಸಮಿತಿಯ ಅದ್ಯಕ್ಷ ಶ್ರೀಗಣೇಶ್ ಪುತ್ರನ್ ಸಂಸದ ಕೋಟರಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಘಾಟ್ ಸಮಸ್ಯೆಯ ಹಿನ್ನೆಲೆಯಲ್ಲಿ ವಂದೇ ಭಾರತ್ ರೈಲಿಗೆ ಸತತವಾಗಿ ಇದ್ದ ವಿಪರೀತ ಅಡಚಣೆಗಳ ಹಿನ್ನೆಲೆಯಲ್ಲಿ ಹಲವು ಬಾರಿ ರೈಲು ಮಂಡಳಿ , ರೈಲು ಸಚೀವಾಲಯದ ಸಭೆ ನಡೆಸಿದ್ದ ಸಂಸದ ಕೋಟ ಸಮಸ್ತ ಕರಾವಳಿಗೆ ಸಂಪರ್ಕದ ಅಗತ್ಯದ ವಿಷಯವನ್ನು ಸಚಿವರಿಗೆ ಮನದಟ್ಟು ಮಾಡಿದ್ದರು.
ಸಂಸದ ಕೋಟ ಕರಾವಳಿಯ ರಸ್ತೆ ಮಾರ್ಗದ ಸವಾಲುಗಳು , ಈಗಿರುವ ರೈಲುಗಳಲ್ಲಿ ತುಂಬಿರುವ ಸೀಟುಗಳೂ ಸೇರಿದಂತೆ ಹಲವು ಸಮಸ್ಯೆಗಶ ಬಗ್ಗೆ ಸಚಿವಾಲಯಕ್ಕೆ ಬಹುತೇಕ ಪ್ರತೀ ತಿಂಗಳೂ ಬೇಟಿ ಕೊಟ್ಟು ಸಭೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಬಹು ಚರ್ಚಿತ ವಂದೇ ಭಾರತ್ ರೈಲನ್ನು ಹಲವು ಪರೀಕ್ಷೆಗಳ ನಂತರ ಭಾರತೀಯ ರೈಲ್ವೆ ಬೆಂಗಳೂರು ಮತ್ತು ಕರಾವಳಿಯ ನಡುವೆ ಓಡಿಸುವ ಕುರಿತು ಪಡೆದ ನಿರ್ದಾರವನ್ನು ಸಂಸದರಿಗೆ ಪತ್ರದ ಮೂಲಕ ರವಾನಿಸಿದೆ.
ಈ ರೈಲಿಗೆ ಕೊಂಕಣ ರೈಲ್ವೆಯ ಉಡುಪಿ ಕಾರವಾರದಲ್ಲಿ ನೀರು ತುಂಬುವ ವ್ವವಸ್ತೆ ಇಲ್ಲದ ಕಾರಣ ರೈಲು ನೀರು ತುಂಬಿಸಿಕೊಳ್ಳಲು ಪಕ್ಕದ ಗೋವಾದ ಮಡಗಾಂವ್ ವರೆಗೆ ಸಂಚರಿಸಲಿದೆ.
ಕಾರವಾರದ ರಕ್ಷಣಾ ನೌಕಾ ನೆಲೆ, ಗೋಕರ್ಣ ಮುರುಡೇಶ್ವರದ ಯಾತ್ರಾ ಸ್ತಳಗಳು , ಕುಂದಾಪುರದ ಕೊಲ್ಲೂರು ಮೂಕಾಂಬಿಕ ದೇಗುಲ , ಉಡುಪಿಯ ಶ್ರೀಕ್ರಷ್ಣ ದೇಗುಲ , ಕರಾವಳಿಯ ಅಸಂಖ್ಯಾತ ಬೀಚುಗಳು ದೇವಾಲಯಗಳು ಈಗ ರಾಜದಾನಿ ಬೆಂಗಳೂರಿನ ಜತೆ ಬೆಸೆದುಕೊಳ್ಳಲಿವೆ.
ಬೆಂಗಳೂರಿನಲ್ಲಿ ನೆಲೆಸಿರುವ ಅಸಂಖ್ಯಾತ ಉಡುಪಿ ಹೋಟೇಲಿಗರು , ಐಟಿ ಉದ್ಯೋಗಿಗಳ ಜತೆ ಪ್ರವಾಸಿಗರಿಗೂ ಈ ರೈಲು ಐಶಾರಾಮದ ಅನುಕೂಲಗಳನ್ನು ನೀಡಲಿದೆ.
ಈ ಹಿಂದೆ ಮಂಗಳೂರು ಮಡಗಾಂವೆ ನಡುವೆ ಓಡುತಿದ್ದ ವಂದೇ ಭಾರತ್ ಸೇವೆಗಳು ಹೊಸ ರೈಲಿನ ಜತೆಯಲ್ಲಿ ವಿಲೀನವಾಗಲಿದ್ದು, ಕರಾವಳಿಯ ಪ್ರಯಾಣಿಕರಿಗೆ ಆರಾಮದಾಯಕ ಸೌಲಭ್ಯ ನೀಡಲಿದೆ.
ಉಡುಪಿ ಸಂಸದರ ಅವಿರತ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ವಂದೇ ಭಾರತ್ ರೈಲು ಸಂಪೂರ್ಣ ಕರಾವಳಿಯ ಉದ್ದಕ್ಕೂ ಓಡುವಲ್ಲಿ ಸಂಸದರು ಮತ್ತು ಅವರ ಜತೆ ನಿಂತ ಕುಂದಾಪುರ ರೈಲ್ವೇ ಸಮಿತಿಯ ಕುರಿತೂ ವ್ಯಾಪಕ ಶ್ಲಾಘನೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಸುಬ್ರಮಣ್ಯ ಪುತ್ತೂರು ಮಂಗಳೂರು ಜಂಕ್ಷನ್ ಉಡುಪಿ ಕುಂದಾಪುರ ಬೈಂದೂರು ಮುರುಡೇಶ್ವರ ಗೋಕರ್ಣ ಕಾರವಾರ ಮೂಲಕ ರೈಲು ಮಡಗಾಂವ್ ತಲುಪಲಿದೆ.
ಬೆಂಗಳೂರು ಮಡಗಾಂವ್ ಎರಡೂ ಕಡೆಯಿಂದ ರೈಲುಗಳು ಪರಸ್ಪರ ದಿಕ್ಕುಗಳ್ಲಲಿ ಆರಂಭವಾಗುವ ನಿರೀಕ್ಷೆ ಇದ್ದು, ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮದ್ಯಾಹ್ನ ನಾಲ್ಕರ ಹೊತ್ತಿಗೆ ಉಡುಪಿ ತಲುಪಲಿದೆ.
ಹಾಗೆಯೇ ಮದ್ಯಾಹ್ನದ ಸುಮಾರಿಗೆ ಉಡುಪಿ ಬಿಟ್ಟು ರಾತ್ರಿ ಒಂಬತ್ತೂವರೆಗೆ ಯಶವಂತಪುರ ತಲುಪುವ ನಿರೀಕ್ಷೆ ಇದೆ.
ಬೆಂಗಳೂರನ್ನು ಕಾರವಾರದ ಜತೆ ವಂದೇ ಭಾರತ್ ಮೂಲಕ ಬೆಸೆಯ ಬೇಕೆಂಬ ಪತ್ರವನ್ನು ರಾಜ್ಯದಲ್ಲಿ ಸಚಿವರಾಗಿದ್ದಾಗಲೇ ವ್ಯಕ್ತಪಡಿಸಿದ್ದ ಕೋಟ ಶ್ರೀನಿವಾಸ್ ಪೂಜಾರಿಯವರು
ಹಾಸನ ಸುಬ್ರಮಣ್ಯ ಮಾರ್ಗ ವಿದ್ಯುತೀಕರಣವಾಗುತ್ತಲೇ ಸಮಿತಿಯ ಜತೆ ನಿರಂತರ ಸಂಪರ್ಕದಲ್ಲಿದ್ದು ವಂದೇ ಭಾರತ್ ರೈಲನ್ನು ಸಂಪೂರ್ಣ ಕರಾವಳಿಗೆ ಸಿಗುವಂತೆ ಮಾಡಿದ್ದಾರೆ ಅವರಿಗೆ ನಮ್ಮ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ರೈಲಿನ ವೇಗ ಹೆಚ್ಚಳಕ್ಕೆ ಪ್ರಯತ್ನಿಸಲಾಗುವುದು.
: ಗಣೇಶ್ ಪುತ್ರನ್
ಅದ್ಯಕ್ಷರು
ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now