ಏಷ್ಯನ್ ಗೇಮ್ಸ್ 2026: ಚೀನಾವನ್ನು ಮಣಿಸಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತೀಯ ಮಹಿಳಾ ಆರ್ಚರಿ ತಂಡ!

ಏಷ್ಯನ್ ಗೇಮ್ಸ್ 2026: ಚೀನಾವನ್ನು ಮಣಿಸಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತೀಯ ಮಹಿಳಾ ಆರ್ಚರಿ ತಂಡ!
0Shares

ನಗೋಯಾ: ವನಿತೆಯರ ಕಾಂಪೌಂಡ್ ಆರ್ಚರಿ ತಂಡದ

ಫೈನಲ್‌ನಲ್ಲಿ ಚೀನಾವನ್ನು 238-234 ಅಂತರದಿಂದ ಮಣಿಸಿದ ಭಾರತ 2026ರ ಏಷ್ಯನ್ ಗೇಮ್ಸ್‌ನಲ್ಲಿ ಬುಧವಾರ(ಸೆ30) ಚಿನ್ನದ ಪದಕ ಗೆದ್ದಿದೆ. ಈ ಮೂಲಕ ಭಾರತ ತಂಡ ವಿಶ್ವ ದಾಖಲೆಯನ್ನೂ ಸರಿಗಟ್ಟಿದೆ.

ಜ್ಯೋತಿ ಸುರೇಖಾ, ಪೃಥಿಕಾ ಪ್ರದೀಪ್ ಮತ್ತು ಚಿಖಿತಾ ತನಿಪ್ರತಿ ಅವರನ್ನೊಳಗೊಂಡ ಭಾರತ ತಂಡ ಕಾಂಪೌಂಡ್‌ ತಂಡದ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದು ವಿಶ್ವ ದಾಖಲೆಯನ್ನು ಸರಿಗಟ್ಟಿದೆ.

ಫೈನಲ್‌ನ ಕೊನೆಯ ಹಂತವನ್ನು ಚೀನಾ 10 ಅಂಕಗಳೊಂದಿಗೆ ಆರಂಭಿಸಿತು. ಆದರೆ ನಂತರ ಎರಡು ಬಾರಿ 9 ಅಂಕಗಳಿಗೆ ಕುಸಿಯಿತು. ಭಾರತ ಮಾತ್ರ ಸತತ ಮೂರು 10 ಅಂಕಗಳನ್ನು ಗಳಿಸಿ ತಿರುಗೇಟು ನೀಡಿತು. ಆ ಕ್ಷಣದಲ್ಲೇ ಕೋಚ್ ಹರ್ಷೋದ್ಗಾರ ಮಾಡಿದರು.

ಚೀನಾ ಕೊನೆಯ ಮೂರು ಬಾಣಗಳಲ್ಲೂ 10 ಅಂಕಗಳನ್ನು ಗಳಿಸಿತು. ಭಾರತವೂ ಅದೇ ರೀತಿಯಲ್ಲಿ ಸತತ ಮೂರು ಪರಿಪೂರ್ಣ 10 ಅಂಕಗಳನ್ನು ದಾಖಲಿಸಿತು. ಇದರೊಂದಿಗೆ ಭಾರತ ವಿಶ್ವ ದಾಖಲೆಯನ್ನು ಸರಿಗಟ್ಟಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now