ಕಡಬ: ಹಿಟ್ ಅಂಡ್ ರನ್ ಪ್ರಕರಣ: ಚಾಲಕನ ವಿರುದ್ಧ ಪ್ರಕರಣ ದಾಖಲು

ಕಡಬ: ಹಿಟ್ ಅಂಡ್ ರನ್ ಪ್ರಕರಣ: ಚಾಲಕನ ವಿರುದ್ಧ ಪ್ರಕರಣ ದಾಖಲು
0Shares

ಕಡಬ: ಅಲಂಕಾರು ಗ್ರಾಮದ ಆಚಾರಿ ಕೊಟ್ಟಾಯ ಬಳಿ ನಡೆದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಡಬ ಪೊಲೀಸರು ಕಪ್ಪು ಬಣ್ಣದ ಎಸ್‌ಯುವಿ ಥಾರ್ ಜೀಪ್ ವಾಹನವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸೆಪ್ಟೆಂಬರ್ 25ರ ರಾತ್ರಿ ನಡೆದ ಈ ಅಪಘಾತದಲ್ಲಿ ಅಲಂಕಾರು ಗ್ರಾಮದ ನಡ್ಲ ನಿವಾಸಿ ಲೋಕೇಶ (42) ಎಂಬ ಬೈಕ್ ಸವಾರ ಮೃತಪಟ್ಟಿದ್ದರು.

ಆಲಂಕಾರು ಪಟ್ಟಣದಲ್ಲಿ ಹಿಂದಿನಿಂದ ಬಂದ ಥಾರ್ ಬೈಕ್‌ಗೆ ಡಿಕ್ಕಿ ಹೊಡೆದು ಚಾಲಕ ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ. ವಾಹನ ಉಪ್ಪಿನಂಗಡಿ ಕಡೆಗೆ ಪರಾರಿಯಾಗಿದೆ ಎಂಬ ಮಾಹಿತಿಯ ಮೇರೆಗೆ, ಆಲಂಕಾರು ಪ್ರದೇಶದ ಸ್ಥಳೀಯ ಯುವಕರು ಆತೂರು, ರಾಮಕುಂಜ, ಕೊಯಿಲಾ, ಉಪ್ಪಿನಂಗಡಿ, ನೆಲ್ಯಾಡಿ ಮತ್ತು ಇತರ ಪ್ರದೇಶಗಳ ಜನರಿಗೆ ಮಾಹಿತಿ ನೀಡಿ ವಾಹನಕ್ಕಾಗಿ ನಿಗಾ ಇಟ್ಟಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now