ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ವಿವಿಧ ಕಾರ್ಮಿಕರ ಸಹಮಿಲನ: ವರ್ಕರ್ಸ್ ಇಂಡಿಯಾ ಫೆಡರೇಶನ್ ಘಟಕ ಉದ್ಘಾಟನೆ, ಕಾರ್ಯಕಾರಿ ಸಮಿತಿ ಆಯ್ಕೆ

ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ವಿವಿಧ ಕಾರ್ಮಿಕರ ಸಹಮಿಲನ: ವರ್ಕರ್ಸ್ ಇಂಡಿಯಾ ಫೆಡರೇಶನ್ ಘಟಕ ಉದ್ಘಾಟನೆ, ಕಾರ್ಯಕಾರಿ ಸಮಿತಿ ಆಯ್ಕೆ
0Shares

ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ರಾಜ್ಯದ ಪ್ರಥಮ ವರ್ಕರ್ಸ್ ಇಂಡಿಯಾ ಫೆಡರೇಶನ್ ನ ಚರ್ಚ್ ಘಟಕದ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆ ಹಾಗೂ ಉದ್ಘಾಟನೆ.

ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚ್ ನ ಕಾರ್ಮಿಕ ಆಯೋಗ ಹಾಗೂ ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಆಶ್ರಯದಲ್ಲಿ ದಿನಾಂಕ 27/09/2026 ರಂದು ಗಂಗೊಳ್ಳಿಯ ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ವಿವಿಧ ಕಾರ್ಮಿಕರ ಸಹಮಿಲನ ಹಾಗೂ ವರ್ಕರ್ಸ್ ಇಂಡಿಯಾ ಫೆಡರೇಶನ್ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮ ಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಳ ವ್ಯಕ್ತಿಗಳಾಗಿ ವರ್ಕರ್ಸ್ ಇಂಡಿಯಾ ಫೆಡರೇಶನ್ ಇದರ ಕರ್ನಾಟಕ ರಾಜ್ಯಾಧ್ಯಕ್ಷರು ಹಾಗೂ ಉಡುಪಿ ಧರ್ಮಪ್ರಾಂತ್ಯದ ಕಾರ್ಮಿಕ ಆಯೋಗದ ನಿರ್ದೇಶಕರಾದ ಶ್ರೀ ಎಲ್ರೋಯ್ ಕಿರನ್ ಕ್ರಾಸ್ಟೊ ರವರು ಭಾಗವಹಿಸಿದ್ದರು.

ಶ್ರೀ ಎಲ್ರೋಯ್ ಕಿರನ್ ಕ್ರಾಸ್ಟೊ ಮಾತನಾಡಿ ವರ್ಕರ್ಸ್ ಇಂಡಿಯಾ ಫೆಡರೇಶನ್ ಇದರ ಮಹತ್ವ ಹಾಗೂ ಕಾರ್ಯವೈಖರಿ ಹಾಗೂ ಸರ್ಕಾರದಿಂದ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಂದನೀಯ ತೋಮಸ್ ರೋಶನ್ ಡಿಸೋಜ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾರ್ಮಿಕ ವರ್ಗದವರು ಸಂಘಟಿತರಾಗಿ ಅವರಿಗೆ ಸಿಗುವ ಸೌಲಭ್ಯ ಗಳನ್ನು ಪಡೆಯಬೇಕೆಂದು ಹೇಳಿದರು.

ವರ್ಕರ್ಸ್ ಇಂಡಿಯಾ ಫೆಡರೇಶನ್ , ಗಂಗೊಳ್ಳಿ ಘಟಕದ ಪದಾಧಿಕಾರಿಗಳಾಗಿ
ಅಧ್ಯಕ್ಷರು.. ಶ್ರೀ ವಿಲ್ಸನ್ ರೆಬೆರೊ
ಉಪಾಧ್ಯಕ್ಷರು..ಶ್ರೀ ವಿಲ್ಸನ್ ಡಾಯಸ್.
ಕಾರ್ಯದರ್ಶಿಗಳು… ಶ್ರೀಮತಿ ಗ್ಲೋರಿಯಾ ಡಿಸೋಜ.
ಸಹಕಾರ್ಯದರ್ಶಿ… ಶ್ರಿ ಪೀಟರ್ ರೆಬೆರೊ
ಸಂಘಟನಾ ಕಾರ್ಯದರ್ಶಿ…. ಶ್ರೀಮತಿ ಕ್ಲಾರಾ ಲೋಬೊ.
ಕೋಶಾಧಿಕಾರಿ…. ಶ್ರೀ ಎಡ್ವರ್ಡ್ ಫೆರ್ನಾಂಡಿಸ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ.

ಶ್ರೀ ಬಾಜಿಲ್ ಪಾಯಸ್
ಶ್ರೀ ಇಗ್ನೇಶಿಯನ್ ಫೆರ್ನಾಂಡಿಸ್
ಶ್ರೀಮತಿ ರೋಜಿ ಫೆರ್ನಾಂಡಿಸ್
ಶ್ರೀ ಅರುಣ್ ಡಿಸೋಜ
ಶ್ರೀ ಕೆವಿನ್ ರೆಬೆಲ್ಲೊ
ಶ್ರೀಮತಿ ವಿಲ್ಮಾ ಡಿಸೋಜ
ಆಯ್ಕೆಯಾದರು. ಇದು ರಾಜ್ಯದಲ್ಲಿ ಘಟಿತವಾದ ಪ್ರಪ್ರಥಮ ಚರ್ಚ್ ಮಟ್ಟದ ವರ್ಕರ್ಸ್ ಇಂಡಿಯಾ ಫೆಡರೇಶನ್ ನ ಘಟಕವಾಗಿದೆ.

ಗಂಗೊಳ್ಳಿ ಚರ್ಚಿನ ಕಾರ್ಮಿಕ ಆಯೋಗದ ಸಂಚಾಲಕರಾದ ಶ್ರೀಮತಿ ಕ್ಲಾರಾ ಲೋಬೊ ಸ್ವಾಗತಿಸಿದರೆ, ಗಂಗೊಳ್ಳಿ ಚರ್ಚಿನ ಆಯೋಗದ ಸಂಯೋಜಕರಾದ ಶ್ರೀಮತಿ ಜೆಸಿಂತಾ ಡಿಸೋಜ ಸಂಪನ್ಮೂಲ ವ್ಯಕ್ತಿಗಳ ಪರಿಚಯ ನೀಡಿದರು. ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಶ್ರೀ ಓವಿನ್ ರೆಬೆಲ್ಲೊ ಕಾರ್ಯಕ್ರಮ ನಿರ್ವಹಿಸಿದರೆ. ಘಟಕದ ಕಾರ್ಯದರ್ಶಿಗಳಾದ ಶ್ರೀಮತಿ ಜಾನೆಟ್ ಡಾಯಸ್ ಧನ್ಯವಾದ ಅರ್ಪಿಸಿದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now