ಮದುವೆ ಊಟಕ್ಕೆ ಹೋದಾಗ ಬೈಕ್ ಮಾಯ; ಆರೋಪಿಯ ಬಂಧನ

ಮದುವೆ ಊಟಕ್ಕೆ ಹೋದಾಗ ಬೈಕ್ ಮಾಯ; ಆರೋಪಿಯ ಬಂಧನ
0Shares

ವಿರಾಜಪೇಟೆ: ಮದುವೆ ಸಮಾರಂಭಕ್ಕೆ ಆಗಮಿಸಿ ಕಲ್ಯಾಣ ಮಂಟಪದ ಬಳಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿಯನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿ, ಕಳವು ಮಾಡಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಂಗಾಲ ಗ್ರಾಮದ ನಿವಾಸಿ ಎನ್.ಬಿ. ಭೀಮಯ್ಯ ಅಲಿಯಾಸ್ ಚಿಂಡ (42) ಬಂಧಿತ ಆರೋಪಿ.

ಘಟನೆ ವಿವರ: ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ನಿವಾಸಿ ಶಾಂತಿ ಹಾಗೂ ಅವರ ಪುತ್ರ ಅಭಿಷೇಕ್ ಅವರು KA-12 YU-5276 ನೋಂದಣಿಯ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ತಾ.20 ರಂದು ಗೋಣಿಕೊಪ್ಪದ ಸವಿತಾ ಸಮಾಜದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು.

ಮದುವೆ ಮುಗಿದ ಬಳಿಕ ಬಿಟ್ಟಂಗಾಲದ ಹೆಗ್ಗಡೆ ಸಮಾಜದಲ್ಲಿ ನಡೆಯುತ್ತಿದ್ದ ಮತ್ತೊಂದು ಮದುವೆ ಸಮಾರಂಭಕ್ಕೆ ತೆರಳಿದ್ದರು. ಕಲ್ಯಾಣ ಮಂಟಪದ ಬಳಿ ವಾಹನ ನಿಲುಗಡೆ ಮಾಡಿ ಭೋಜನಕ್ಕೆ ತೆರಳಿದ್ದರು. ಭೋಜನ ಮುಗಿಸಿ ವಾಪಸ್ ಬಂದಾಗ ವಾಹನ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.
ಸಂಜೆಯವರೆಗೂ ಹುಡುಕಾಟ ನಡೆಸಿದರೂ ವಾಹನ ಪತ್ತೆಯಾಗದ ಹಿನ್ನೆಲೆಯಲ್ಲಿ ಮಾಲೀಕರು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now