
ತುಳು ಭಾಷೆಗೆ ದ್ವಿತೀಯ ಅಧಿಕೃತ ಭಾಷೆಯ ಸ್ಥಾನಮಾನ : ಲಯನ್ಸ್ ಸಭೆಗಳನ್ನು ತುಳುವಿನಲ್ಲಿ ನಡೆಸಲು ಜಿಲ್ಲಾ ದ್ವಿತೀಯ ಗವರ್ನರ್ ಆಶಯ
ಉಡುಪಿ : ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟದಲ್ಲಿ ತುಳುನಾಡಿಗೆ ಐತಿಹಾಸಿಕ ಗೌರವ ಸಿಕ್ಕಿದ್ದು, ತುಳು ಭಾಷೆಗೆ ರಾಜ್ಯದ ದ್ವಿತೀಯ ಅಧಿಕೃತ ಭಾಷೆಯನ್ನಾಗಿ ಸರಕಾರ ಘೋಷಣೆ ಮಾಡಿದ್ದನ್ನು ಲಯನ್ಸ್ ಜಿಲ್ಲೆ 317C ಯ ಪ್ರಥಮ ಉಪಗವರ್ನರ್ ಲಯನ್ ಹರಿಪ್ರಸಾದ್ ರೈ ಹರ್ಷ ವ್ಯಕ್ತಪಡಿಸಿದ್ದಾರೆ ಮತ್ತು ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುಭಾಷಿಕರೆ ಹೆಚ್ಚಿದ್ದು, ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಗಳ ಸಭೆಯು ತುಳುವಿನಲ್ಲಿಯೇ ನಡೆದರೆ ಇನ್ನಷ್ಟು ಉತ್ತಮ ಎಂದು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ತುಳು ಭಾಷಿಕರೆ ಹೆಚ್ಚಿರುವ ಕ್ಲಬ್ ಗಳಲ್ಲಿ ಸಭೆಯನ್ನು ತುಳುವಿನಲ್ಲಿ ನಡೆಸುವುದಲ್ಲದೆ, ಲಯನ್ಸ್ ನೀತಿ ಸಂಹಿತೆ ಮತ್ತು ಧ್ವಜ ವಂದನೆಯನ್ನು ತುಳುವಿನಲ್ಲಿ ನಡೆಸಿದರೆ ತುಳು ಭಾಷೆಗೆ ಇನ್ನಷ್ಟು ಬಲ ದೊರಕುತ್ತದೆ ಎಂದಿದ್ದಾರೆ.

ಹಲವಾರು ವರ್ಷಗಳ ತುಳುನಾಡಿಗರ ಕನಸನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನನಸು ಮಾಡಿದ್ದು, ನಮ್ಮ ಸಭೆಗಳನ್ನು ತುಳುವಿನಲ್ಲಿ ನಡೆಸಿದರೆ, ತುಳುವಿಗೆ ಇನ್ನಷ್ಟು ಗೌರವ ಕೊಟ್ಟಾಗುತ್ತದೆ. ಈ ಹಿನ್ನಲೆಯಲ್ಲಿ ಕ್ಲಬ್ ಗಳು ಗಮನ ವಹಿಸಲು ಜಿಲ್ಲಾ ಪ್ರಥಮ ಉಪ ಗವರ್ನರ್ ಲಯನ್ ಹರಿಪ್ರಸಾದ್ ರೈ ಲಯನ್ಸ್ ಮುಖಂಡರಿಗೆ ಕರೆ ನೀಡಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now