ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಾನಮುಕ್ತರ“ನವಜೀವನೋತ್ಸವ ಕಾರ್ಯಕ್ರಮ”

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಾನಮುಕ್ತರ“ನವಜೀವನೋತ್ಸವ ಕಾರ್ಯಕ್ರಮ”
0Shares

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌(ರಿ) ಕುಂದಾಪುರ 1, ಕುಂದಾಪುರ-2, ಬೈಂದೂರು ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ(ರಿ) ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ|ಹೇಮಾವತಿ ವಿ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಕುಂದಾಪುರದ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ “ನವಜೀವನೋತ್ಸವ” ಕಾರ್ಯಕ್ರಮವನ್ನು ನಡೆಸಲಾಗಿರುತ್ತದೆ.

            ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಯು ಎಸ್‌ ಶೆಣೈಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ವ್ಯಸನಮುಕ್ತ ಜೀವನವನ್ನು ಅಳವಡಿಸಿಕೊಂಡು, ಉತ್ತಮ ಬದುಕಿನತ್ತ ಹೆಜ್ಜೆ ಹಾಕಿರುವ ನವಜೀವನ ಸದಸ್ಯರು ತಮ್ಮ ಅನುಭವಗಳನ್ನು ಕುಟುಂಬ ಹಾಗೂ ಸಮಾಜದೊಂದಿಗೆ ಹಂಚಿಕೊಳ್ಳಬೇಕು. ಕುಟುಂಬದ ಸಹಕಾರ ಮತ್ತು ಆತ್ಮವಿಶ್ವಾಸದಿಂದ ನವಜೀವನವನ್ನು ಸದೃಢವಾಗಿ ಮುಂದುವರಿಸಬೇಕು” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ ಮಾತನಾಡಿ, “ವ್ಯವಸಮುಕ್ತ ಜೀವನವು ವ್ಯಕ್ತಿಯ ಬದುಕಿನ ಜೊತೆಗೆ ಇಡೀ ಕುಟುಂಬದ ನೆಮ್ಮದಿಗೂ ಕಾರಣವಾಗುತ್ತದೆ. ನವಜೀವನ ಸದಸ್ಯರು ಪರಸ್ಪರ ಪ್ರೋತ್ಸಾಹಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು.ನವಜೀವನೋತ್ಸವವು ಸಾಧಕರನ್ನು ಗೌರವಿಸುವುದರ ಜೊತೆಗೆ ಅವರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮವಾಗಿದೆ”ಎಂದರು.

 ಅಖಿಲ ಕರ್ನಾಟಕ ಜನಜಾಗೃತಿ  ವೇದಿಕೆಯ ಶಿಬಿರಾಧಿಕಾರಿ ಕುಮಾರ್‌ ಟಿ ಪ್ರಾಸ್ತಾವಿಕ ಮಾತನಾಡಿ, ನವಜೀವನ ಸಮಿತಿಯ ಉದ್ದೇಶ, ಸದಸ್ಯರ ಸಾಧನೆ ಹಾಗೂ ಕುಟುಂಬದ ಸಹಕಾರದ ಮಹತ್ವವನ್ನು ವಿವರಿಸಿದರು. ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕ ಉದಯ್‌ ಅವರ ನೇತೃತ್ವದಲ್ಲಿ ನವಜೀವನ ಸಮಿತಿ ಸದಸ್ಯರು ಹಾಗೂ ಅವರ ಕುಟುಂಬದವರಿಗಾಗಿ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸದಸ್ಯರು ಉತ್ಸುಕತೆಯಿಂದ ಪಾಲ್ಗೊಂಡರು.

     ಕಾರ್ಯಕ್ರಮದಲ್ಲಿ ಬೈಂದೂರು ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಧಾಕರ ಆಚಾರ್ಯ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ರಾಮಕಿಶನ್‌ ಹೆಗ್ಡೆ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ಗೋಪಾಲ್‌ ಕಾಂಚನ್‌, ಜಗದೀಶ ಆಚಾರ್ಯ, ರಾಘವೇಂದ್ರ ಪೈ, ಮಹಾಬಲೇಶ್ವರ ಆಚಾರ್ಯ, ಎಂ. ಆರ್‌ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಂಜು ಬಿಲ್ಲವ ಹಾಗೂ ಬಸ್ರೂರು ವಲಯದ ಮಾಜಿ ಅಧ್ಯಕ್ಷರಾದ ಉದಯ್‌, ಯೋಜನೆಯ ಮೇಲ್ವಿಚಾರಕರುಗಳು, ಜ್ಞಾನವಿಕಾಸ ಸಮನ್ವಯಾಧಿಕಾರಿಯವರು, ಆಡಳಿತ ಸಹಾಯಕ ಪ್ರಬಂಧಕರು ಉಪಸ್ಥಿತರಿದ್ದರು.

     ಕುಂದಾಪುರ ತಾಲೂಕು ಯೋಜನಾಧಿಕಾರಿ ಉಮೇಶ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಬೈಂದೂರು ತಾಲೂಕು ಯೋಜನಾಧಿಕಾರಿ ಸಂಜಯ್‌ ನಾಯ್ಕ್‌ ಸ್ವಾಗತಿಸಿ, ಕುಂದಾಪುರ-2 ತಾಲೂಕಿನ ಯೋಜನಾಧಿಕಾರಿ ಸುಧೀರ ಹಂಗಳೂರು ವಂದಿಸಿದರು.
0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now