
ಪ್ರಧಾನಿ ನರೇಂದ್ರ ಮೋದಿಯವರಿಗೆ 76 ವರುಷ ತುಂಬಿರುವ ಮತ್ತು 25 ಸಂವತ್ಸರಕ್ಕೂ ಹೆಚ್ಚು ದೇಶದ ಹಿತಕ್ಕೆ ಹಾಗೂ ಸಮಾಜದ ಜನರ ಒಳಿತಿಗೆ ಹಗಲಿರುಳು ಎನ್ನದೆ ದೇಶ ಸೇವೆ ಮಾಡಲು ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವರು ಆಯುಷ್ಯ, ಆರೋಗ್ಯ ನೀಡಲಿ ಎಂದು ಅವರ ಅಭಿಮಾನಿಗಳು ಸೆ. 17ರಂದು ವಿಶೇಷ ಪ್ರಾರ್ಥನೆ ನೇರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಕನಕಮಜಲು ಸೊಸೈಟಿಯ ನಿರ್ದೇಶಕ ಡಾ. ಗೋಪಾಲಕೃಷ್ಣ ಭಟ್, ಗಂಗಾಧರ ಕಾಳಮನೆ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭೈತಡ್ಕ ಮೊದಲಾದವರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now