
ಉಡುಪಿ / ಮಂಗಳೂರು : ಬಹು ನಿರೀಕ್ಷಿತ ವಿವಿಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳ ಪಟ್ಟಿ ಬಿಡುಗಡೆಯಾಗಿದ್ದು, ಉಡುಪಿ ಜಿಲ್ಲೆಗೆ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಪದ್ಮರಾಜ್ ರಾಮಯ್ಯ ರವರನ್ನು ನೂತನ ಅಧ್ಯಕ್ಷರಾಗಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಜಿ ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.

ರಾಜ್ಯದ 35 ಜಿಲ್ಲೆಗೆ ನೂತನ ಅಧ್ಯಕ್ಷರು ನೇಮಕವಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಐದಕ್ಕೆ ಐದು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಿಲ್ಲದೆ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ಸಿಗೆ ಕಿಶನ್ ಹೆಗ್ಡೆ ಇದೀಗ ನೂತನ ಅಧ್ಯಕ್ಷರಾಗಿ ನೇಮಕರಾಗಿದ್ದಾರೆ. ಕಳೆದ ಚುನಾವಣೆ ಸಮಯದಲ್ಲಿ ಕಾರ್ಯಧ್ಯಕ್ಷರಾಗಿ ನೇಮಕರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಹೊಸ ನಾಯಕತ್ವಕ್ಕೆ ಮಣೆ ನೀಡಿದ್ದು, ಕಳೆದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿಲ್ಲವ ಸಮಾಜದ ನಾಯಕ ಪದ್ಮರಾಜ್ ರಾಮಯ್ಯ ರವರನ್ನು ಆಯ್ಕೆ ಮಾಡಿದೆ. ಉಭಯ ಜಿಲ್ಲೆಗಳಲ್ಲಿ ಪ್ರಬಲರಾಗಿರುವ ಬಂಟ ಮತ್ತು ಬಿಲ್ಲುವ ಸಮುದಾಯಕ್ಕೆ ನೂತನ ಅಧ್ಯಕ್ಷಗಿರಿ ಸಿಕ್ಕಿದ್ದು, ಮತ್ತೆ ಕಾಂಗ್ರೆಸ್ ಶಕೆ ಆರಂಭವಾಗುತ್ತಾ ಎಂಬುದನ್ನು ಮಾತ್ರ ಕಾದುನೋಡಬೇಕಾಗಿದೆ.
ಉಭಯ ಜಿಲ್ಲೆಗಳಲ್ಲಿ 20ಕ್ಕೂ ಅಧಿಕ ಮಂದಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಿದ್ದರೂ, ಇದೀಗ ನೂತನ ಅಧ್ಯಕ್ಷರ ನೇಮಕದೊಂದಿಗೆ, ಕಾರ್ಯಕರ್ತರ ಕುತೂಹಲಕ್ಕೆ ತೆರೆ ಬಿದ್ದಿದೆ.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now