
ಮುಲ್ಕಿ: ಸುಮಾರು 7ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಓರ್ವ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ತಿರುಪ್ಪುರ ಜಿಲ್ಲೆಯ ತಿರುಪ್ಪುರ ಗ್ರಾಮದ ಶಾಸ್ತ್ರಿ ಸ್ಟೀಟ್ ನಿವಾಸಿ ನಾಗರಾಜನ್ (38) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯ ವಿರುದ್ಧ 2018ರಲ್ಲಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ದೈವಸ್ಥಾನದಲ್ಲಿ ಕಳವುಗೈದಿರುವ ಆರೋಪವಿದ್ದು, ಈತನ ಕಳೆದ 7ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಈತನ ಬಂಧನಕ್ಕಾಗಿ ಮೂಡುಬಿದಿರೆ ಹಿರಿಯ ಸಿಜೆ ಆ್ಯಂಡ್ ಜೆ.ಎಂ.ಎಫ್.ಸಿ ನ್ಯಾಯಾಲಯ ದಸ್ತಗಿರಿ ವಾರಂಟ್, ಪ್ರೋಕ್ಲಮೇಷನ್ ಹೊರಡಿಸಿತ್ತು.
ಈ ಹಿನ್ನೆಲೆ ಆರೋಪಿಯ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು ತಮಿಳುನಾಡು ಜಿಲ್ಲೆಯ ತಿರುಪ್ಪುರ ಜಿಲ್ಲೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now