
ಉಡುಪಿ : ಸಪ್ಟೆಂಬರ್ 8ರಂದು ಉಡುಪಿ – ಮಂಗಳೂರಿನ ಕ್ರೈಸ್ತರಿಗೆ ತೆನೆ ಹಬ್ಬ ಮತ್ತು ಮೊಂತಿ ಫೆಸ್ ಸಂಭ್ರಮ. ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ತನ್ನ ಮೂರನೇ ವರ್ಷದ ಸಂಭ್ರಮದ ಪ್ರಯುಕ್ತ ತೆನೆ ಹಬ್ಬ ಮತ್ತು ಮೊಂತಿ ಫೆಸ್ತ್ ಸಂಭ್ರಮದ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. ಕುಟುಂಬ ಹಾಗೂ ಸಂಪ್ರದಾಯದೊಂದಿಗೆ ಆಚರಿಸುವ ಹಬ್ಬದ ಕ್ಷಣಗಳನ್ನು ಸೆರೆಹಿಡಿದು ಹಂಚಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳೊಂದಿಗೆ 10 ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಸೊಸೈಟಿಯ ಪ್ರಕಟಣೆ ತಿಳಿಸಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು 2026ರ ಹಬ್ಬದ ಸಂದರ್ಭದಲ್ಲಿ ತೆಗೆದಿರುವ ಮೊಂತಿ ಹಬ್ಬದ ಆಚರಣೆಯ ಛಾಯಾಚಿತ್ರಗಳನ್ನು ಕಳುಹಿಸಬೇಕು. ಛಾಯಾಚಿತ್ರಗಳನ್ನು ಸೆಪ್ಟೆಂಬರ್ 14, 2026ರೊಳಗೆ ಸಲ್ಲಿಸಬೇಕು.
ಛಾಯಾಚಿತ್ರಗಳನ್ನು ಇ-ಮೇಲ್ ಮೂಲಕ nativitymary2026@gmail.com ಗೆ ಕಳುಹಿಸಬಹುದು. ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಡಿಜಿಟಲ್ ನಿರ್ದೇಶಕ ಸ್ಟೀವನ್ ಕುಲಾಸೊ – 9901701381 ಅವರನ್ನು ಸಂಪರ್ಕಿಸಬಹುದು.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದ ಛಾಯಾಚಿತ್ರ ಸೊಸೈಟಿ ನೂರಾರು ಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಹಬ್ಬದ ಸಂಭ್ರಮ, ಕುಟುಂಬದ ಒಗ್ಗಟ್ಟು ಹಾಗೂ ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಛಾಯಾಚಿತ್ರಗಳ ಮೂಲಕ ದಾಖಲಿಸುವ ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now