ಕೋಟೇಶ್ವರದ ಚಿರಂತನ ಶಿಕ್ಷಣ ಸಂಸ್ಥೆಯ ವಿನುತಾ. ಬಿ. ಶೆಟ್ಟಿಗೆ ಉತ್ತಮ ಶಿಕ್ಷಕಿ ಹಾಗೂ ಶೈಕ್ಷಣಿಕ ನಾಯಕಿಯೆಂದು ಗುರುತಿಸಲ್ಪಟ್ಟು ರಾಷ್ಟ್ರ ಮಟ್ಟದ ಪ್ರಶಸ್ತಿಯ ಗೌರವ.

ಕೋಟೇಶ್ವರದ ಚಿರಂತನ ಶಿಕ್ಷಣ ಸಂಸ್ಥೆಯ ವಿನುತಾ. ಬಿ. ಶೆಟ್ಟಿಗೆ ಉತ್ತಮ ಶಿಕ್ಷಕಿ ಹಾಗೂ ಶೈಕ್ಷಣಿಕ ನಾಯಕಿಯೆಂದು ಗುರುತಿಸಲ್ಪಟ್ಟು ರಾಷ್ಟ್ರ ಮಟ್ಟದ ಪ್ರಶಸ್ತಿಯ ಗೌರವ.
0Shares

ಕುಂದಾಪುರ, ಆ.26: ಶಿಕ್ಷಣ ಕ್ಷೇತ್ರದಲ್ಲಿ ನೀಡುತ್ತಿರುವ ಅರ್ಥಪೂರ್ಣ ಕೊಡುಗೆ ಹಾಗೂ ಸೇವೆಯನ್ನು ಪರಿಗಣಿಸಿ, ಕೋಟೇಶ್ವರದ ಚಿರಂತನ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ವಿನುತಾ ಬಿ ಶೆಟ್ಟಿ ಅವರು ‘ಭಾರತ್ ರಾಷ್ಟ್ರೀಯ ಶಿಕ್ಷಕ ಶ್ರೇಷ್ಠತಾ ಪ್ರಶಸ್ತಿ-2026’ಗೆ ಭಾಜನರಾಗಿದ್ದಾರೆ.

ಕೇಂದ್ರ ಸರಕಾರದ ನೀತಿ ಆಯೋಗದ ಮಾನ್ಯತೆಗೆ ಒಳಪಟ್ಟ ಸಿಇಡಿ (CED ಸೆಂಟರ್ ಫಾರ್ ಎಜುಕೇಶನಲ್ ಡೆವಲಪ್ ಮೆಂಟ್ ಫೌಂಡೇಶನ್) ಅವಾರ್ಡ್ ಕೌನ್ಸಿಲ್‌ನ ನಿರ್ಣಾಯಕ ಮಂಡಳಿಯು ಇವರ ಶೈಕ್ಷಣಿಕ ಸಾಧನೆ, ನಾವೀನ್ಯತಾ ಬೋಧನಾ ವಿಧಾನ ಹಾಗೂ ನಾಯಕತ್ವ ಗುಣಗಳನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡಿ ಈ ಗೌರವಕ್ಕೆ ಆಯ್ಕೆ ಮಾಡಿದೆ.

ಸೆ.13ರಂದು ನವದೆಹಲಿಯಲ್ಲಿ ನಡೆಯಲಿರುವ ‘ಸಿಇಡಿ – ಭಾರತ್ ಎಜುಕೇಶನ್ ಕಾನ್ಕ್ಲೇವ್’ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ದೇಶದ ಪ್ರಮುಖ ಶಿಕ್ಷಣ ತಜ್ಞರು, ನೀತಿ ನಿರೂಪಕರು ಹಾಗೂ ಗಣ್ಯರ ಸಮ್ಮುಖದಲ್ಲಿ ಇವರಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.

ಇದೇ ಸಂದರ್ಭದಲ್ಲಿ, ಇವರ ಸಹಿತ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ಶಿಕ್ಷಕರ ಸಾಧನೆಯ ಪಯಣವನ್ನು ಒಳಗೊಂಡ ‘ಶೈನಿಂಗ್ ಬಿಯಾಂಡ್ ಲಿಮಿಟ್ಸ್: ಎ ಸ್ಟೋರಿ ಆಫ್ ಪ್ಯಾಶನ್ ಅಂಡ್ ಪರ್ಪಸ್’ ಎಂಬ ವಿಶೇಷ ‘ಕಾಫಿ ಟೇಬಲ್’ ಪುಸ್ತಕ ಬಿಡುಗಡೆಯಾಗಲಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಂಡು ಪ್ರಿ ನರ್ಸರಿ, ಎಲ್ ಕೆಜಿ, ಯುಕೆಜಿ ಶಿಕ್ಷಣ, ಶಿಕ್ಷಕರ ತರಬೇತಿ ಕೇಂದ್ರ, ಮಕ್ಕಳ – ಹದಿಹರೆಯದವರ ಮಾರ್ಗದರ್ಶನ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಚಿರಂತನ ಎಜುಕೇಶನ್ ಟ್ರಸ್ಟ್‌ನ ಉದ್ಯೋಗಿಯಾಗಿ ರಾಷ್ಟ್ರಮಟ್ಟದ ಈ ಗೌರವಕ್ಕೆ ಪಾತ್ರರಾಗಿರುವುದು ಸಂಸ್ಥೆಗೆ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ನಿರ್ದೇಶಕಿ ಡಾ| ಚಿಂತನಾ ರಾಜೇಶ್ ತಿಳಿಸಿದ್ದಾರೆ.

ಶ್ರೀಮತಿ ವಿನುತಾ ಬಿ. ಶೆಟ್ಟಿ

ಶ್ರೀಮತಿ ವಿನುತಾ ಬಿ. ಶೆಟ್ಟಿ ಅವರು 16 ವರ್ಷಗಳ ಶೈಕ್ಷಣಿಕ ಅನುಭವ ಹೊಂದಿರುವ ಸಮರ್ಪಿತ ಭಾವದ ಶಿಕ್ಷಕಿ ಹಾಗೂ ಆಪ್ತಸಮಾಲೋಚಕಿ. B.Ed. (ಹಿಂದಿ ಶಿಕ್ಷಾಸ್ನಾತಕ)ನಲ್ಲಿ ಚಿನ್ನದ ಪದಕ ಪಡೆದಿರುವ ಅವರು, ECCE ಹಾಗೂ ಯೆನೆಪೋಯ ವಿಶ್ವವಿದ್ಯಾಲಯದಿಂದ Guidance & Counsellingನಲ್ಲಿ PGDCG ಪೂರ್ಣಗೊಳಿಸಿದ್ದಾರೆ. ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ ವಿ ಕೆ ಆರ್ ಹೈ ಸ್ಕೂಲ್, ಸುಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಶಿಕ್ಷಕಿ, ಹಾಗೂ ಅಕಾಡೆಮಿಕ್ ಕೋಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಚಿರಂತನ ಸಂಸ್ಥೆಯ ಪ್ರಿಮ್ ರೋಸ್ ಫ಼ೌಂಡೇಶನ್ ಶಾಲಾ ವಿಭಾಗದ ಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಗು ಕೇಂದ್ರಿತ ಶಿಕ್ಷಣ, ಶಿಕ್ಷಕರ ಮಾರ್ಗದರ್ಶನ, ಸಮಾಲೋಚನೆ ಮತ್ತು ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now