ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ : ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದ ಫೋಟೋ ಸ್ಪರ್ಧೆ 2026

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ : ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದ ಫೋಟೋ ಸ್ಪರ್ಧೆ 2026
0Shares

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ : ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದ ಫೋಟೋ ಸ್ಪರ್ಧೆ 2026

ಉಡುಪಿ : ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಉಡುಪಿ ಸಂಪೂರ್ಣವಾಗಿ ಸಜ್ಜಾಗಿದೆ. ತಾಸೆಯ ಶಬ್ದ, ಹುಲಿವೇಷ,ರಕ್ಕಸ ಸಹಿತ ವಿವಿಧ ವೇಷಧಾರಿಗಳು ಸಿದ್ಧತೆಯಲ್ಲಿದ್ದಾರೆ. ವಿಟ್ಲ ಪಿಂಡಿಗೆ ಶ್ರೀ ಕೃಷ್ಣ ಮಠದ ಪರಿಸರ ಕೊನೆಯ ಹಂತದ ಸಿದ್ಧತೆಯಲ್ಲಿದೆ. ಹಲವು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮುದ್ದುಕೃಷ್ಣ ಸ್ಪರ್ಧೆಯು ಸಕ್ರಿಯವಾಗಿ ನಡೆಯುತ್ತಿದೆ. ಇದರ ನಡುವೆ ಮೂರು ವರ್ಷಗಳ ಹಿಂದೆ ಉಡುಪಿಯಲ್ಲಿ ಆರಂಭವಾದ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ತನ್ನ ಮೂರನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ, ಉಡುಪಿ ಜಿಲ್ಲೆಯ ಗ್ರಾಹಕರಿಗೆ, ಹಿತೈಷಿಗಳಿಗೆ ಮತ್ತು ಸಮಸ್ತ ಸಾರ್ವಜನಿಕರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದ ಫೋಟೋ ಸ್ಪರ್ಧೆಯನ್ನು ಮೊಬೈಲ್ ಪ್ರಿಯರಿಗಾಗಿ ಆಯೋಜಿಸಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದ ಯಾವುದೇ ಛಾಯಾಚಿತ್ರವನ್ನು ತಮ್ಮ ಮೊಬೈಲ್ ನಲ್ಲಿ ಕ್ಲಿಕ್ ಮಾಡಿ ಕೆಳಗೆ ಕಳುಹಿಸಿದ ಇ-ಮೇಲ್ ಐಡಿ ಗೆ ಕಳಿಸಿದರೆ ಸಾಕು. ಅತ್ಯುತ್ತಮ ಚಿತ್ರಗಳಿಗೆ ಹಲವು ಬಹುಮಾನಗಳ ಸುರಿಮಳೆ ಇದೆ.

ಸ್ಪರ್ಧೆಯ ಪ್ರಮುಖ ನಿಯಮಗಳು ಹೀಗಿವೆ :
ಒಬ್ಬರು ಎರಡು ಚಿತ್ರಗಳನ್ನು ಕಳಿಸಬಹುದು. ಮೊಬೈಲಲ್ಲಿ ತೆಗೆದ ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಫೋಟೋಶಾಪ್‌ನಲ್ಲಿ ಎಡಿಟ್ ಮಾಡಿದ ಯಾವುದೇ ಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ. ತಾವು ಮೊಬೈಲ್ನಲ್ಲಿ ಕ್ಲಿಕ್ ಮಾಡುವ ಛಾಯಾಚಿತ್ರವು ಉಡುಪಿ ಜಿಲ್ಲೆಯಲ್ಲಿ 2026ರ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದ ಚಿತ್ರವಾಗಿರಬೇಕು.

ಛಾಯಾಚಿತ್ರವನ್ನು ಕಳುಹಿಸಲು ಕೊನೆಯ ದಿನಾಂಕ – ಶನಿವಾರ ಸೆಪ್ಟೆಂಬರ್ 12. ಫಲಿತಾಂಶವನ್ನು ಸೆಪ್ಟೆಂಬರ್ 30ರಂದು ಪ್ರಕಟಿಸಲಾಗುವುದು. ಛಾಯಾಚಿತ್ರವನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ : astamiuscs2026@gmail.com

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now