ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ : ಧ್ವಜಾರೋಹಣ ಮತ್ತು ಭಕ್ತಿಯಿಂದ ನಡೆದ ವಿಶೇಷ ಪೂಜೆ

ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ : ಧ್ವಜಾರೋಹಣ ಮತ್ತು ಭಕ್ತಿಯಿಂದ ನಡೆದ ವಿಶೇಷ ಪೂಜೆ
0Shares

ಉಡುಪಿ : ಇಲ್ಲಿಯ ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ ಬಳಿ ಪ್ರತಿಷ್ಠಾಪಿತಗೊಂಡಿರುವ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿಯವರ ಉದ್ಯಾನವನದಲ್ಲಿ, ಶ್ರೀ ನಾರಾಯಣಗುರು ಯುವ ವೇದಿಕೆ ಉಡುಪಿ ಇವರ ವತಿಯಿಂದ ಗುರುಗಳ ಧ್ವಜಾರೋಹಣ ಕಾರ್ಯಕ್ರಮ ಮತ್ತು ವಿಶೇಷ ಭಕ್ತಿಯ ಪೂಜೆ ನಡೆಯಿತು.

ಸರ್ವಧರ್ಮಿಯ ಮುಖಂಡರಾದ ಕಡೆಕಾರು ಗ್ರಾಮ ಪಂಚಾಯತಿಯ ನಿಕಟ ಪೂರ್ವ ಉಪಾಧ್ಯಕ್ಷ ನವೀನ್ ಶೆಟ್ಟಿ, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ ಮತ್ತು ಉಡುಪಿ ತಾಲೂಕು ಭೂ ನ್ಯಾಯಮಂಡಳಿಯ ಸದಸ್ಯ ರೋಯ್ಸ್ ಫೆರ್ನಾOಡಿಸ್ ಜಂಟಿಯಾಗಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 172ನೇ ಜಯಂತಿಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು.

ಬಳಿಕ ನವಚೇತನ ಯುವತಿ ಮಂಡಲ ಇವರಿಂದ ಭಜನೆ ಕಾರ್ಯಕ್ರಮ ಮತ್ತು ಸುರೇಂದ್ರ ಕಟ್ಟೆಗುಡ್ಡೆ ಮತ್ತು ತಂಡದಿಂದ ನಾದಸ್ವರ ವಾದನ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಪ್ರತಿಷ್ಠಾಪಿತ ಶ್ರೀ ನಾರಾಯಣ ಗುರುಗಳ ಸಾನಿಧ್ಯದಲ್ಲಿ ಗುರು ಜಯಂತಿಯ ಸಂಭ್ರಮದ ವಿಶೇಷ ಭಕ್ತಿ ಪೂರ್ವಕ ಪೂಜಾ ವಿಧಿ ವಿಧಾನಗಳು ನೆರವೇರಿದವು. ವಿವಿಧ ಪರಿಸರದಿಂದ ಆಗಮಿಸಿದ ಭಕ್ತಾದಿಗಳು ಮತ್ತು ಸಾಮಾಜಿಕ ನಾಯಕರುಗಳು ಶ್ರೀ ನಾರಾಯಣ ಗುರು ಸ್ವಾಮೀಜಿಗಳ ಅನುಗ್ರಹ ಆಶೀರ್ವಾದ ಮತ್ತು ಪ್ರಸಾದವನ್ನು ಸ್ವೀಕರಿಸಿದರು

.

ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಶ್ರೀ ನಾರಾಯಣ ಗುರು ಯುವ ವೇದಿಕೆಯ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಅಧ್ಯಕ್ಷ ಮಿಥುನ್ ಅಮೀನ್, ಪ್ರಮುಖರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೃಷ್ಣಮೂರ್ತಿ ಆಚಾರ್ಯ, ದಿವಾಕರ್ ಕುಂದರ್, ದಿನೇಶ್ ಪುತ್ರನ್, ಜಿತೇಂದ್ರ ಶೆಟ್ಟಿ, ಶಬರೀಶ್ ಸುವರ್ಣ, ಜಯಕರ್ ಸೇರಿಗಾರ್, ಗಣೇಶ್ ಕುಮಾರ್ ಸಂಪಿಗೆನಗರ, ಪ್ರಶಾಂತ್ ಪೂಜಾರಿ, ಪ್ರಶಾಂತ್ ಸಾಲಿಯಾನ್, ರಾಘವೇಂದ್ರ ಕುತ್ಪಾಡಿ, ಸುಜಯ್ ಪೂಜಾರಿ, ದಿವಾಕರ್ ಬೊಳ್ಜೆ, ಶರತ್ ಶೆಟ್ಟಿ, ಸುನಿಲ್ ಪೂಜಾರಿ ಮಲ್ಪೆ, ನವೀನ್ ಪೂಜಾರಿ ಮಲ್ಪೆ, ಶರತ್ ಪೂಜಾರಿ ಕಲ್ಯಾಣಪುರ, ನಾಗರಾಜ್ ಕಾಮತ್, ಮೋಹನ್ ಸೋನ್ಸ್, ಆರಿಫ್, ಲಕ್ಷ್ಮಣ್ ಸಂಪಿಗೆನಗರ, ಸಚಿನ್ ಸಾಲ್ಯಾನ್, ಸಾಯಿನಾಥ್, ಸಾಯಿ ರಾಜ್, ವೀಣಾ ಪ್ರಕಾಶ್, ಹರೀಶ್ ಪೂಜಾರಿ, ಉದಯ ಕರ್ಕೇರಾ, ಸುಪ್ರೀತ್ ಸುವರ್ಣ, ನಿಶಾಂತ್ ಕರ್ಕಡ,

ಪ್ರಭಾಕರ್ ಕೋಟ್ಯಾನ್, ಸುಧಾಕರ್, ದಿನೇಶ್ ಜತ್ತನ್ನ ಮತ್ತಿತರರು ಉಪಸ್ಥಿತರಿದ್ದರು

.ದಿನೇಶ್ ಜತ್ತನ್ನ ಆರುರೂತೋಟ ಪ್ರಸ್ತಾವಿಕವಾಗಿ ಮಾತನಾಡಿದರು.

ಸ್ಟೀವನ್ ಕುಲಾಸೊ ಉದ್ಯಾವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now