ಸಾರ್ವಜನಿಕರಲ್ಲಿ ಬಲಕೈಯ ಶಸ್ತ್ರ ಚಿಕಿತ್ಸೆಗೆ ಸಹಾಯ ಕೋರಿ ಮನವಿ

ಸಾರ್ವಜನಿಕರಲ್ಲಿ ಬಲಕೈಯ ಶಸ್ತ್ರ ಚಿಕಿತ್ಸೆಗೆ ಸಹಾಯ ಕೋರಿ ಮನವಿ
0Shares

ಸುಮಾರು 5 ವರ್ಷಗಳ ಹಿಂದೆ ದಿನಾಂಕ 07-05-2021 ರಂದು ಬೆಳಿಗ್ಗೆ 7-20ರ ವೇಳೆ ಕೊಳಲಗಿರಿ ಯಲ್ಲಿ ಇರುವ ನನ್ನ ಅಂಗಡಿಯಲ್ಲಿ ಅಗತ್ಯದ ಕೆಲಸವನ್ನು ಮುಗಿಸಿ ಹೋಂಡಾ ಸ್ಕೂಟರ್‌ನಲ್ಲಿ ಮನೆಗೆ ಮರಳು ತಿದ್ದ ವೇಳೆ ಎದುರು ದಿಕ್ಕಿನಿಂದ ಬರುತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹೊಡೆದಾಗ ನನ್ನ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ನಾನು ಧರಿಸಿದ್ದ ಹೆಲೈಟ್ ಕುತ್ತಿಗೆಯ ಬಲ ಭಾಗಕ್ಕೆಯ ಬಡಿದ ಪರಿಣಾಮ ಬಲಕ್ಕೆ ಸಂಪೂರ್ಣ ಬಲ ಕಳೆದುಕೊಂಡಿತು. ತಕ್ಷಣ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದಾಖಲಾಗಿ 9 ದಿನಗಳ ಕಾಲ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ಅಸ್ವಸ್ಥ ಪತ್ನಿ ಹಾಗೂ ಕುಟುಂಬ ನಿರ್ವಹಣೆಗಾಗಿ ಒಂದು ಕೈನಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ದುರಾದೃಷ್ಟವಶಾತ್ 17 ಜನವರಿ 2025 ರಂದು ಪತ್ನಿ ಅತಿಯಾದ ಮಧುಮೇಹದಿಂದ ಮೃತ ಪಟ್ಟಳು. 2 ತಿಂಗಳುಗಳಿಂದ ಅತಿಯಾದ ಕಾರಣ ಉಡುಪಿ ಆಸ್ಪತ್ರೆಗೆ ತೋರಿಸಿದಾಗ ಕೊಯಮುತ್ತೂರಿನ ಗಂಗಾ ಮೆಡಿಕಲ್ ಸೆಂಟರ್‌ಗೆ ತೋರಿಸಲು ತಿಳಿಸಿದರು.

ಕೈ ನೋವು ಅತಿಯಾದಕಾರಣ ಸರ್ಜರಿ ಸದ್ಯಕ್ಕೆ ಅಸಾಧ್ಯವೆಂದು ತಿಳಿಸಿ ಚೆನ್ನೈನಲ್ಲಿರುವ ಸಿಮ್ಸ್ ಆಸ್ಪತ್ರೆಯಲ್ಲಿ ನೋವು ಕಡಿಮೆ ಮಾಡಲು ಬೆನ್ನು ಹುರಿಯಲ್ಲಿರುವ ನರ ಒಂದನ್ನು ನಿಷ್ಕ್ರಿಯಗೊಳಿಸಬೇಕೆಂದು ತಿಳಿಸಿದರು. ಸಿಮ್ಸ್ಗೆ ಭೇಟಿ ನೀಡಿದಾಗ ನನ್ನನ್ನು ಪರೀಕ್ಷಿಸಿದ ವೈದ್ಯರು 6 ಲಕ್ಷ ರೂಪಾಯಿ ಖರ್ಚು ಆಗುವುದೆಂದು ತಿಳಿಸಿರುತ್ತಾರೆ. ಎರಡು ಸರ್ಜರಿಗಳು ಇರುವುದರಿಂದ ಒಟ್ಟು 11 ಲಕ್ಷ ರೂಪಾಯಿಗಳಾಗುತ್ತದೆ. ಅಷ್ಟು ದೊಡ್ಡ ಮೊತ್ತ ಭರಿಸಲು ನನ್ನಿಂದ ಅಸಾಧ್ಯವಾಗಿದ್ದು ಸಹೃದಯ ದಾನಿಗಳಿಂದ ಸಾದ್ಯವಾದ ಸಹಾಯಕ್ಕಾಗಿ ನನ್ನ ಕೋರಿಕೆ.

  • ರೆಜಿನಾಲ್ಡ್ ಡಿಸಿಲ್ವಾ, ಪೇತ್ರಿ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now