
ದಿನಾಂಕ: 02/08/2026 ರಂದು ರಾತ್ರಿ 23.50 ಗಂಟೆಗೆ ಯಶ್ರಾಜ್ ಎಂಬವರು ಅವರ ತಮ್ಮ ಪವನ್ ಕುಮಾರ್ ಹಾಗೂ ಶ್ರೇಯಸ್ ಎಂಬವರ ಜೊತೆ ಮಣಿಪಾಲ ಠಾಣಾ ಸರಹದ್ದಿನ ಉಡುಪಿ ತಾಲೂಕು ಹೆರ್ಗ ಗ್ರಾಮದ ಈಶ್ವರನಗರದ ಜನನಿ ಬಾರ್ & ರೆಸ್ಟೋರೆಂಟ್ ಬಳಿ ರಸ್ತೆಯಲ್ಲಿ ಬರುತ್ತಿರುವಾಗ ಆರೋಪಿತರುಗಳಾದ 1) ಅಕ್ಷಯ್ ಎ ಪ್ರಾಯ: 21 ವರ್ಷ ಕಲ್ಲಪನಕೆರೆ, ಸೀಗೆಹಟ್ಟಿ, ಶಿವಮೊಗ್ಗಾ ತಾಲೂಕು ಮತ್ತು ಜಿಲ್ಲೆ 2) ಪುನೀತ್ ಎಸ್ ಪ್ರಾಯ: 21 ವರ್ಷ ಹಾಲ್ಕೊಳ ಅಂಚೆ ಮತ್ತು ಗ್ರಾಮ, ಶಿವಮೊಗ್ಗ ಪೇಟೆ, ಶಿವಮೊಗ್ಗಾ ತಾಲೂಕು ಮತ್ತು ಜಿಲ್ಲೆ 3) ಶಮಂತ ಕೆ ಆರ್ ಪ್ರಾಯ: 21 ವರ್ಷ ಮಂಜುನಾಥ ಬಡಾವಣೆ, ಪುರ್ಲೆ, ಶಿವಮೊಗ್ಗಾ ತಾಲೂಕು ಮತ್ತು ಜಿಲ್ಲೆ , 4) ಯಶವಂತ್ ಬಿ.ಜೆ ಪ್ರಾಯ: 21 ವರ್ಷ ವಾಸ: ನೇಹಾ ನಿವಾಸ, ವಿನೋಬನಗರ, ಶಿವಮೊಗ್ಗಾ ತಾಲೂಕು ಮತ್ತು ಜಿಲ್ಲೆರವರುಗಳು KA14-P-4245 ನೇ ನಂಬ್ರದ ಸ್ವಿಪ್ಟ್ ಡಿಸಾಯರ್ ಕಾರು ಹಾಗೂ KA14-MB-4109 ನೇ ನಂಬ್ರದ ಪೋರ್ಡ್ ಕಾರಿನಲ್ಲಿ ಬಂದು ಪವನ್ ಕುಮಾರ್ ರವರನ್ನು ತಡೆದು ನಿಲ್ಲಿಸಿ ವಿನಾಕಾರಣ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು ಪವನ್ ಕುಮಾರ್ ರವರಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಮೆಟಲ್ ಪಂಚ್ ನಿಂದ ಪವನ್ ಕುಮಾರ್ ರವರ ಮುಖಕ್ಕೆ ಗುದ್ದಿ ಮೂಗಿಗೆ ತೀವ್ರ ಸ್ವರೂಪದ ಗಾಯಗೊಳಿಸಿದ್ದು, ಅಲ್ಲದೆ ಯಶ್ರಾಜ್ ಹಾಗೂ ಅವರ ಸ್ನೇಹಿತ ಶ್ರೇಯಸ್ ರವರಿಗೂ ಕಾಲಿನಿಂದ ತುಳಿದು ಬಟ್ಟೆಗಳನ್ನು ಹರಿದು, ಸಾಯಿಸುವುದಾಗಿ ಜೀವ ಬೆದರಿಕೆ ಹಾಕಿ ಹೋಗಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮಣಿಪಾಲ ಠಾಣಾ 120/2026 U/S 126(2), 352, 351, 115, 118(1), 118(2) ಜೊತೆಗೆ 3(5) ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮೇಲ್ಕಂಡ ಆರೋಪಿತರುಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಆರೋಪಿತರುಗಳೆಲ್ಲರೂ ನಿಟ್ಟೆಯ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂಬುದಾಗಿ ತನಿಖೆ ಸಮಯ ತಿಳಿದುಬಂದಿರುತ್ತದೆ. ಮಣಿಪಾಲ ಠಾಣಾ ಪಿ.ಎಸ್.ಐ ತಿಮ್ಮೇಶ್ ಬಿ.ಎನ್ ರವರು ತನಿಖೆ ನಡೆಸುತ್ತಿದ್ದಾರೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now